Friday, September 20, 2024

 Q1 : If a, b, c are in Arithmetic Progression (AP), then (a-b) / (b-c) 

Answer : 1 

Explanation : if a,b,c are in AP then (a-b) = -d ( where d is common difference) , and (b-c) = -d 

hence -d/-d = 1


Q2: Find the common difference of AP, whose nth term is an = 5n+3

Answer : If an=5n+1, 

  when  n = 1,    a1 = 5(1)+1 = 6

            n = 2,    a2  = 5(2)+1 = 11 

common difference d = a2-a1 = 11-6 = 5

 

Q3 :  Find four consecutive terms in AP whose sum is 20 and sum of whose squares is 120.

Answer :  Consider 4 consecutive terms of AP as a-3d, a-d, a+d and a+3d 

Sum, (a-3d)+(a-d)+(a+d)+(a+3d) = 20 

         4a = 20 

        a = 5

(a-3d)² + (a-d)² + (a+d)² + (a+3d)² = 120

expanding,

a² -6ad+9d² + a² -2ad+d² +a² +2ad+d² +a² +6ad+9d²= 120

4a² + 20d² = 120

4(5)² + 20d² = 120

100 + 20d² = 120

 20d² = 20

 d² =1

d = ±1

with a =5 and d = 1, AP is 

(a-3d) = 5-3(1) = 2

(a-d) = 5-1 = 4

(a+d) = 5+1 = 6

(a+3d) = 5+3(1) = 8

Hence the Answer : 2,4,6,8

Saturday, September 26, 2020

ತುಳುವಿಗೂ ಪಾಕಿಸ್ಥಾನ ಭಾಷೆಗೂ ಎತ್ತಣ ಸಂಬಂಧ?

ನದಿ ಮೂಲ, ಋಷಿ ಮೂಲ, ಭಾಷೆಯ ಮೂಲವನ್ನು ಹುಡುಕುವುದು ಬಹಳ ಕಠಿಣ ಕಜ್ಜ. ಭಾಷೆ ಎಂಬುದು ನಿರಂತರ ಹರಿಯುತ್ತಿರುವ ನೀರಿನಂತೆ. ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದಿದ್ದರೂ ಇನ್ನೂ ಭಾಷೆಗಳ ಮೂಲ, ಉಗಮದ ಬಗೆಗಿನ ಜಿಜ್ಞಾಸೆಗೆ ಎಲ್ಲರೂ ಒಪ್ಪತಕ್ಕ ಉತ್ತರ ದೊರೆತಿಲ್ಲ. 
ದ್ರಾವಿಡ ಭಾಷಾ ಕವಲಿನಲ್ಲಿ ಅನೇಕ ಪುರಾತನ ಭಾಷೆಗಳಿವೆ ಅವುಗಳಲ್ಲಿ ತುಳು ಕೂಡಾ ಒಂದು. ದಕ್ಷಿಣ ಭಾರತದ ಒಂದು ಪುಟ್ಟ ಭೂ ಭಾಗಕ್ಕೆ ಸೀಮಿತವಾದ ತುಳು ಭಾಷೆಯ ಉಗಮ ಹೇಗಾಯಿತು? ತುಳುವಿನ ಮೂಲ ಯಾವುದು? ತುಳು ಭಾಷಿಗರು ಇಂದಿನ ತುಳುನಾಡಿನ ಮೂಲನಿವಾಸಿಗಳೇ? ಹೀಗೆ ಅನೇಕ ಪ್ರಶ್ನೆಗಳ ಸರಮಾಲೆಯನ್ನು ಹೆಣೆಯುತ್ತಾ ಹೊರಟ ನನಗೆ ಅನಿರೀಕ್ಷಿತವಾಗಿ ಪಾಕಿಸ್ಥಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ಮಾತನಾಡುವ ಬ್ರಹೂಇ ಭಾಷೆಯ ಪರಿಚಿತವಾಯಿತು.
ಬ್ರಹೂಇ ಭಾಷೆ ಪಾಕಿಸ್ಥಾನದಲ್ಲಿರುವ ಬ್ರಹೂಇ ಜನರ ಆಡು ನುಡಿ. ಇವರ ಬುಡಕಟ್ಟು ಇರಾನ್, ಅಫ್ಘಾನಿಸ್ಥಾನದಲ್ಲೂ ಇವೆ. ಈ ಭಾಷೆಯನ್ನು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯೆಂದು ಗುರುತಿಸಲಾಗಿದೆ. ಸುಮಾರು ನಾಲ್ಕು ದಶಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಬ್ರಹೂಇ ಭಾಷೆಗಿದೆ.  ದಕ್ಷಿಣ ಭಾರತದೆಲ್ಲೆಡೆ ಹರಡಿರುವ ದ್ರಾವಿಡ ಭಾಷಾ ವರ್ಗದ ನುಡಿಯೊಂದು ಉತ್ತರದ ಅದೂ ಸಾವಿರಾರು ಮೈಲಿ ದೂರದಲ್ಲಿ ಇರುವ ಕುರುಹು ಹಲವಾರು ಸಂಶೋಧನೆಗಳಗೆ ಎಡೆಮಾಡಿಕೊಟ್ಟಿತು. ಕೆಲವರು ಪೂರ್ವದಲ್ಲಿ ದ್ರಾವಿಡ ಭಾಷೆಗಳನ್ನಾಡುವ ಜನಾಂಗ ಸಿಂಧೂ ನಾಗರಿಕತೆಯ ಮೂಲದವರಾಗಿದ್ದು, ಕಾಲಾಂತರದಲ್ಲಿ ನಾಗರಿಕತೆ ಅವನತಿಯಂಚಿಗೆ ಬಂದಾಗ ಈ ದ್ರಾವಿಡ ಜನಾಂಗ ದಕ್ಷಿಣದೆಡೆಗೆ ವಲಸೆ ಬಂದುದಾಗಿಯೂ, ಇವರ ಕವಲೊಂದು ಇನ್ನೂ ಉತ್ತರದಲ್ಲೇ ಉಳಿದರೆಂದು ಹೇಳಿದರೆ ಇನ್ನೂ ಕೆಲವರು ಬ್ರಹೂಇ ಮಾತನಾಡುವ ಜನಾಂಗ ದಕ್ಷಿಣದಿಂದ ಉತ್ತರದೆಡೆ ಸುಮಾರು ಸಾವಿರದೈನೂರು ವರ್ಷಗಳ ಮೊದಲು ವಲಸೆ ಹೋಗಿರಬಹುದು ಎಂದೂ ಊಹಿಸಿದ್ದಾರೆ.
ಏನೇ ಇರಲಿ ಭಾಷಾ ವಿಜ್ಞಾನಿಗಳಿಗೆ ದಕ್ಷಿಣದ ದ್ರಾವಿಡ ನುಡಿಗಳೊಂದಿಗೆ ಬ್ರಹೂಇನ ಹೋಲಿಕೆ ಮಾಡಿ ಅಧ್ಯಯನ ನಡೆಸುವುದು ಮತ್ತು ಭಾಷೆಯ ಉಗಮದ ಬಗ್ಗೆ ಸಂಶೋಧಿಸುವುದು ಹೊಸ ವಿಷಯವಾಯಿತು. ಈ ನಿಟ್ಟಿನಲ್ಲಿ ಹಲವಾರು ಸಂಶೋಧಕರು ಬ್ರಹೂಇ ಮತ್ತು ತಮಿಳು ಭಾಷೆಗಿರುವ ಸಾಮ್ಯತೆ, ಬ್ರಹೂಇ-ಕನ್ನಡ, ಬ್ರಹೂಇ-ತೆಲುಗು ಹೀಗೆ ದಕ್ಷಿಣದ ದೊಡ್ಡ ದೊಡ್ಡ ನುಡಿಗಳೊಂದಿಗೆ ತುಲನೆ ಮಾಡಿ ಪುಸ್ತಕಗಳನ್ನೇ ಬರೆದರು. ಆದರೆ ಯಾವೊಬ್ಬ ಸಂಶೋಧಕನೂ ಬ್ರಹೂಇಗೆ ಮತ್ತು ತುಳುವಿಗೆ ಯಾವುದೇ ರೀತಿಯ ಸಂಬಂಧವಿರುವ ಕುರಿತು ಊಹಿಸದೇ ಇರುವುದೂ ಕೂಡ ಸೋಜಿಗವೇ ಸರಿ. ದಶಕಗಳಿಂದ ಹರಿದು ಬಂದ ತುಳುವಿನ ಕುರಿತಾದ ಉದಾಸೀನ ಧೋರಣೆ ಇಲ್ಲೂ ಮುಂದುವರಿದದ್ದು ಸ್ಪಷ್ಟ.
ದ್ರಾವಿಡ ಭಾಷೆಗಳು ತನ್ನ ಮೂಲ ಸ್ವರೂಪಗಳಿಂದ ಕವಲೊಡೆದು ಒಂದೊಂದಾಗಿ ಹೊಸ ಭಾಷೆಗಳಾಗಿ ಬೆಳವಣಿಗೆ ಹೊಂದಿದವು. ಇವುಗಳಲ್ಲಿ ತುಳು ಬಹಳ ಬೇಗನೆ ಮೂಲ ಭಾಷೆಯಿಂದ ಕವಲೊಡೆದು ಸ್ವತಂತ್ರ ಅಸ್ಥಿತ್ವವನ್ನು ಪಡೆದುಕೊಂಡಿತು. ತುಳು ಭಾಷೆ ಮುಂದೆ ಅನೇಕ ರೂಪವನ್ನು ಪಡೆದುಕೊಂಡು ಪೂರ್ವದ ಪಳಂತುಳು, ನಡು ತುಳು ಮತ್ತು ಪೊಸ ತುಳು ರೂಪಗಳಾಗಿ ಬೆಳೆದವು. ಸುಮಾರು ಏಳ್ನೂರು ವರ್ಷಗಳ ಹಿಂದಿನ ತುಳು ಈಗಿನ ತುಳುವಿಗಿಂತ ಬಹಳ ವಿಭಿನ್ನವಾಗಿತ್ತು. ಈಗಿನ ತುಳು ಸಂಸ್ಕೃತ, ಕನ್ನಡದ ಗಾಢ ಪ್ರಭಾವದಿಂದಾಗಿ ಅನೇಕ ತನ್ನ ಪದಗಳನ್ನು ಕಳೆದುಕೊಂಡಿತು.
ಭಾಷೆಗಳ ತೌಲನಿಕ ಅಧ್ಯಯನ ಒಂದು ಬಹಳ ಕ್ಲಿಷ್ಟ ಕೆಲಸ. ಮೂಲ ಪದಗಳನ್ನು ಹುಡುಕಿ ಹೆಕ್ಕಿ ತೆಗೆದು ಅದಕ್ಕೆ ಸರಿಹೊಂದುವ ಇನ್ನೊಂದು ಭಾಷೆಯ ಮೂಲ ಪದವನ್ನು ಹುಡುಕಿ ಸಾಮ್ಯತೆಯನ್ನು ಗುರುತಿಸಬೇಕು. ಇಂತಹ ಅಧ್ಯಯನ ನಡೆಸಲು ಕನಿಷ್ಟ ಒಂದು ಭಾಷೆಯಲ್ಲಾದರೂ ಪ್ರೌಢಿಮೆಯನ್ನು ಬೆಳೆಸಿಕೊಳ್ಳಬೇಕು. ನಾನು ತುಳು ಮತ್ತು ಬ್ರಹೂಇಯ ಅಧ್ಯಯನವನ್ನು ಕೈಗೆತ್ತಿಕೊಂಡಾಗ ನನಗೆ ಬ್ರಹೂಇ ಪದಗಳನ್ನು ಗುರುತಿಸುವುದೇ ಬಹಳ ತ್ರಾಸದಾಯಕ ಕೆಲಸವಾಗಿತ್ತು. ಸಾವಿರಾರು ವರ್ಷಗಳಿಂದ ದ್ರಾವಿಡ ಭಾಷಾ ಸಂಪರ್ಕದಿಂದ ದೂರವಿದ್ದ ಬ್ರಹೂಇಯಲ್ಲಿ ದ್ರಾವಿಡ ಪದಗಳು ಉಳಿದಿರುವುದು ಕೇವಲ ಹದಿನೈದು ಪ್ರತಿಶತವಷ್ಟೇ, ಉಳಿದಂತೆ ಭಾಷೆ ತನ್ನ ಸುತ್ತಮುತ್ತಲಿನ ಭಾಷೆಗಳ ಪ್ರಭಾವದಿಂದಾಗಿ ಎಲ್ಲವನ್ನೂ ಎರವಲು ಪಡೆದಂತೆ ಕಾಣುತ್ತಿತ್ತು. ಇದರ ಕಾರಣದಿಂದಾಗಿ ಅನೇಕ ವೀಡಿಯೋಗಳು, ಲೇಖನಗಳನ್ನು ಓದಿ ತುಳುವಿನೊಂದಿಗೆ ಸಮದೂಗಿಸಬಲ್ಲ ಕೆಲವು ಪದಗಳನ್ನು ಗುರುತಿಸಿದ್ದೇನೆ. ಅವುಗಳಲ್ಲಿ ಕೆಲವನ್ನು ಪಟ್ಟಿಮಾಡಿದ್ದೇನೆ.
ಬ್ರಹೂಇ(ಬ್ರ) - ತುಳು(ತು)
ಇರತ್ - ರಡ್ಡ್
ಮೂಸಿ - ಮೂಜಿ
ಕಣ್ಣ್ - ಕಣ್ಣ್
ತೇಲ್ - ತೇಲ್
ದಿತ್ತರ್ - ನೆತ್ತೆರ್
ಬಿಲ್ - ಬಿರು
ಬಾ - ಬಾಯಿ
ದೀರ್ - ನೀರ್
ಕಲ್ಲ್ - ಕಲ್ಲ್
ಕೊಟಿ - ಕೊಟ್ಯ
ಎಲೊ ದೆ - ಎಲ್ಲೆ ದಿನ
ಬಯಿ - ಬಯಿ
ಪರ್ರ್ - ಪಡೀರ್
ಕಾಕೋ - ಕಕ್ಕೆ
ಪೀ - ಪೀ
ಬಲ್ಲ - ಮಲ್ಲ
ಪನ್ - ಪನ್
ಏಯ್ - ಆಯೆ
ಅಹ್ನೊ - ಇನಿ
ಆತ್ - ಏತ್
ದೇರ್ - ಏರ್
ಬರ್ - ಬಲ
ಪಿಶಿ - ಪುಚ್ಚೆ
ಪಲ್ - ಪಾಂಪು
ಪುತರ್ - ಪಜಿರ್
ಪಲ್ - ಪಲಯಿ
ಕುರುಕ - ಕೊರೆಪು
ಪಾಲ್ - ಪೇರ್
ಇಂದಿನ ಬ್ರಹೂಇ ಭಾಷೆಯ ಸಂಖ್ಯೆಗಳನ್ನು ಗಮನಿಸಿದರೆ ಕೇವಲ ಇರತ್(೨) ಮತ್ತು ಮೂಸಿ(೩) ಅಷ್ಟೇ ದ್ರಾವಿಡ ಮೂಲದ ಪದಗಳು ಉಳಿದ ಎಲ್ಲಾ ಸಂಖ್ಯಾಸೂಚಕಗಳು ಇಂಡೋ-ಆರ್ಯನ್ ಭಾಷಾ ವರ್ಗಗಳಿಂದ ಎರವಲು ಪಡೆದಂತವುಗಳು. ಬ್ರಹೂಇ ಭಾಷೆಯ ಮೂಲಗಳು ಇನ್ನೂ ಅವರ ಜನಪದ ಹಾಡುಗಳಲ್ಲಿ ಉಳಿದುಕೊಂಡಿದ್ದು, ಆ ಹಾಡುಗಳು ತೆಲುಗು ಭಾಷೆಯನ್ನಾಡುವ ಪ್ರದೇಶಗಳ ಹಳ್ಳಿಗಳಲ್ಲಿ ಪ್ರಚಲಿತದಲ್ಲಿರುವ ಜನಪದ ಹಾಡುಗಳ ಧಾಟಿಯಂತಿವೆ. ಇನ್ನು ಪದಗಳ ವಾಕ್ಯರಚನೆಯ ಕುರಿತು ಸತತ ಅಧ್ಯಯನ ನಡೆಸಿದ ವಿದ್ವಾಂಸರು ಬ್ರಹೂಇ - ತಮಿಳಿಗಿರುವ ಹತ್ತಿರದ ಕೊಂಡಿಯನ್ನು ಗುರುತಿಸಿದ್ದಾರೆ. 
ಒಳಮುಖ ವಲಸೆ ಮತ್ತು ಹೊರಮುಖ ವಲಸೆಯ ಪ್ರಕ್ರಿಯೆಗಳಿಗೆ ಅನೇಕ ಪ್ರಮೇಯಗಳಿದ್ದು ಇವುಗಳ ಕುರಿತು ಸತತ ಡಿಬೇಟ್ಗಳು ನಡೆದರೂ, ದ್ರಾವಿಡ ಭಾಷೆಯ ಕೊಂಡಿಯೊಂದು ಸಾವಿರಾರು ಮೈಲಿ ದೂರದಲ್ಲಿ ಹರಡಿಕೊಂಡಿರುವ ಕಾರಣವನ್ನು   ಗುರುತಿಸಲು ಈ ಸಿದ್ಧಾಂತಗಳು ವಿಫಲವಾಗಿವೆ.
ಬ್ರಹೂಇ ದ್ರಾವಿಡ ನುಡಿಯಾಗಿರುವುದರಿಂದ ಇದಕ್ಕೆ ಇತರ ದ್ರಾವಿಡ ಭಾಷೆಗಳೊಂದಿಗೆ ಸಂಬಂಧವಿರುವುದು ಮತ್ತು ಶಬ್ಧಗಳಲ್ಲಿ ಹೋಲಿಕೆಯಿರುವುದು ಸಹಜ. ಆದರೆ ಇವೆಲ್ಲವುಗಳ ನಡುವೆ ನಮಗೆ ಕಂಡುಬರುವ ಇನ್ನೊಂದು ವಿಷಯವೇ ಬಲೂಚಿಸ್ಥಾನದಲ್ಲಿರುವ 'ಪಿರಾಕ್' ಎನ್ನುವ ಜಾಗ. ಪಿರಾಕ್ ಸಿಂಧು ನಾಗರಿಕತೆಯ ಕುರುಹು ಇರುವ ಜಾಗ ಮತ್ತು ಈ ಜಾಗವನ್ನು ಉತ್ಕನನ ನಡೆಸಿದ ಪುರಾತತ್ವ ತಜ್ಞರು ಕಬ್ಬಿಣದ ಬಳಕೆ ಮತ್ತು ಕುದುರೆಯನ್ನು ಬಳಸಿದ ಪುರಾತನ ಪಳಯುಳಿಕೆಗಳನ್ನೂ ಪತ್ತೆಹಚ್ಚಿದರು.ಪಿರಾಕ್ ಪ್ರದೇಶದ ಮೂಲ ಬೆಳೆ ಭತ್ತವಾಗಿತ್ತು.  ತುಳುವಲ್ಲಿ 'ಪಿರಾಕ್' ಎಂಬ ಪದಕ್ಕೆ ಪುರಾತನ ಕಾಲದ ಎಂಬ ಅರ್ಥವಿದೆ. 'ಪಿರಾಕ್ ದ' ಎಂದರೆ ಹಿಂದಿನ/ಹಳೆಯ ಎಂದರ್ಥ.  ಯಾರಿಗೆ ಗೊತ್ತು ದ್ರಾವಿಡ ಭಾಷೆಯನ್ನಾಡುವ ಜನಾಂಗವೇ ಒಮ್ಮೆ ಸಿಂಧೂ ಕಣಿವೆಯಲ್ಲಿ, ಪಿರಾಕ್ನಲ್ಲಿ ಬದುಕಿದ್ದಿರಬಹುದು ಅವರ ಕುರುಹೇ ಇಂದಿನ ಬ್ರಹೂಇಗಳಾಗಿರಬಹುದು. ತುಳುವರು 'ಪಿರಾಕ್ ಡ್ ಇಂಚ ಇತ್ತ್ ಜಿ' ಎಂದು ಹೇಳುವ ವಾಕ್ಯದ ಮೂಲ ಅರ್ಥವೇ ಬೇರೆಯಿರಬಹುದು. ಒಟ್ಟಿನಲ್ಲಿ ಎಲ್ಲವೂ ಸಾಧ್ಯ ಮತ್ತು ಅಸಾಧ್ಯ.
ತುಳು ಇನ್ನೂ ತನ್ನ ಒಡಳಾಲದಲ್ಲಿ ಅನೇಕ ಒಗಟುಗಳನ್ನು ಬಚ್ಚಿಟ್ಟುಕೊಂಡಿದೆ. ತುಳುವಿನ ಕುರಿತಾದ ಉದಾಸೀನ ಧೋರಣೆಯನ್ನು ಬಿಟ್ಟರೆ ಇನ್ನಷ್ಟು ಹೊಸ ವಿಷಯಗಳು ಮತ್ತು ಹೊಸ ಸಂಶೋಧನೆಗಳಿಗೆ ನಾಂದಿಯಾಗಬಹುದು. ತುಳು ಮತ್ತು ಬ್ರಹೂಇ ಸಂಬಂಧದ ಬಗ್ಗೆ ಅಗಾಧ ಸಂಶೋಧನೆಯ ಅಗತ್ಯತೆಯಿದೆ. ಈ ಸಂಶೋಧನೆಗಳು ನಡೆದರೆ  ಮುಂದೆ ಕಾಲ ಚಕ್ರದಲ್ಲಿ ಉದುಗಿಹೋದ ಅವೆಷ್ಟೋ ಸೋಜಿಗಗಳು ಬೆಳಕಿಗೆ ಬರುವುದು ಖಚಿತ. 

- ಮಹಿ ಮುಲ್ಕಿ

Monday, September 21, 2020

ವೇದೊಂಕುಳೆ ಸಾರೊದ ತುಳು ಭಾಷೆ

ಪಶ್ಚಿಮ ಘಟ್ಟದ ಮಡಿಲಲ್ಲಿ ನಿಂತು, ವಿಶಾಲ ಕಡಲಿಗೆ ಸೆರಗು ಹಾಸಿ, ಹಸಿರ ಬನಸಿರಿಯಲ್ಲಿ ನಳನಳಿಸುತ್ತಿರುವ ಜೀವನದಿ ತುಳು. ತುಳುವಬ್ಬೆ ಪಂಚವರ್ಣದ ಸೀರೆಯುಟ್ಟು, ರಂಗು ರಂಗಿನ ನಾಡಿನ ಜನಮಂದೆಯ ಹೃದಯಸಿಂಹಾಸನದಲಿ ಮೆರೆಯುತ್ತಿರುವ ರಾಜೇಶ್ವರಿ. ಇಂತಹ ಪರಮ ಪವಿತ್ರ ನಾಡಿನ ಭಾಷೆಯ ಸೊಬಗು ಕುಂದುವುದೇನು? ಸಾವಿರಾರು ವರ್ಷಗಳಲ್ಲಿ ಅಗಣಿತ ಜನಪದ ಸಾಹಿತ್ಯವನ್ನು ಹೆಣೆಯುತ್ತಾ, ಇತಿಹಾಸವನ್ನು ಪಾಡ್ದನ, ಬೀರ, ಸಂಧಿಗಳ ಮೂಲಕ ಜನಾಂಗಕ್ಕೆ ಪಸರಿಸುತ್ತಾ ಬೆಳೆದ ಶ್ರಮಜೀವಿಗಳೇ ತುಳುವಿಗೆ ಆಧಾರ. ವಿಶ್ವದ ಯಾವುದೇ ಮಹಾಕಾವ್ಯಕ್ಕೂ ಸಂವಾಧಿಯಾಗಿ ನಿಲ್ಲಬಲ್ಲ ಅಪರಿಮಿತ ಮೌಖಿಕ ಕಾವ್ಯ ಪರಂಪರೆಯನ್ನು ಸೃಷ್ಟಿಸಿದ ತುಳುವ ಜನಾಂಗದ ಭಾಷಾ ಪ್ರೇಮ, ತನ್ನ ನೆಲದ ಸಂಸ್ಕೃತಿಯ ಮೇಲಿನ ಹಿರೆಮೆಯ ಕುರಿತು ಎರಡು ಮಾತಿಲ್ಲ. ಭೌಗೋಳಿಕವಾಗಿ ಇತರ ದ್ರಾವಿಡ ವರ್ಗಕ್ಕಿಂತ ಪ್ರತ್ಯೇಕವಾಗಿ ಬೆಳೆದ ತುಳುನಾಡು ಭೂ-ಭಾಗ  ಭಾಷಿಕವಾಗಿಯೂ ತನ್ನತನವನ್ನು ಉಳಿಸಿಕೊಂಡು ಸ್ವತಂತ್ರವಾಗಿ ಬೆಳೆದು, ಇತರ ಸಮಕಾಲೀನ ಭಾಷೆಗಳ ಪ್ರಭಾವವನ್ನು ಮಿತಿಗೊಳಿಸಿ ತನ್ನ ಶಬ್ದ ಭಂಡಾರ ಬರಿದಾಗದಂತೆ ಬೆಳೆಯಿತು.
ಇಷ್ಟೆಲ್ಲಾ ಶ್ರೀಮಂತ ಪರಂಪರೆ, ಇತಿಹಾಸ, ಪುರಾತನ ಸಂಸ್ಕೃತಿಯಿರುವ ತುಳುವಿಗೆ 'ಸಾಹಿತ್ಯವಿಲ್ಲದ ಭಾಷೆ' ಎಂಬ ಹಣೆಪಟ್ಟಿ ಶತಶತಮಾನಗಳಿಂದಲೂ ಅವ್ಯಾಹತವಾಗಿ ಅಂಟಿಕೊಂಡೇ ಬಂತು. ಇಪ್ಪತ್ತನೇ ಶತಮಾನದ ಉತ್ತರಾರ್ಧದವರೆಗೂ ಈ ಅಪವಾದ ತುಳು ಭಾಷೆಯ ಬಗ್ಗೆ ವಿದ್ವಾಂಸರ ಕೂಟದಲ್ಲಿ ಕೇಳಿ ಬಂದಿತ್ತು. ಬುದ್ಧಿಮತ್ತೆಯಲ್ಲಿ ಎಲ್ಲರಿಗಿಂತಲೂ ಮುಂದಿರುವ ತುಳುವರು, ಪುರಾತನ ಸಾಹಿತ್ಯ ಬರೆಯದಿರುವರೇ? ಈ ಕುರಿತು ರವಷ್ಟೂ ಸಂಶಯ ತಾಳದೆ, ಔಪಚಾರಿಕವಾಗಿ ತುಳುವನ್ನು ಮೂಲೆಗುಂಪು ಮಾಡುವ ಪ್ರಯತ್ನ ತೆರೆಮರೆಯಲ್ಲಿ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ. ವ್ಯವಸ್ಥಿತವಾಗಿ ತುಳು ಕೇವಲ ಮೌಖಿಕ ಭಾಷೆ, ಶಿಕ್ಷಣಯೋಗ್ಯವಲ್ಲದ, ಲಿಪಿಯಿಲ್ಲದ, ಶಿಷ್ಟ ಸಾಹಿತ್ಯ ಪರಂಪರೆಯಿಲ್ಲದ ಭಾಷೆಯೆಂದ ಹಲವಾರು ತಲೆಮಾರುಗಳ ತಲೆಯಲ್ಲಿ ತುಂಬಲಾಯಿತು ಮತ್ತು ಈ ಸುಳ್ಳು ಸುದ್ಧಿ ಇನ್ನೂ ಪ್ರಚಲಿತದಲ್ಲಿರುವುದು ಶೋಚನೀಯ.
ಈ ಸಂದಿಗ್ಧ ಕಾಲಘಟ್ಟದಲ್ಲಿ ತುಳುನಾಡಿನ ತಿಲಕ ವೆಂಕಟರಾಜ ಪುಣಿಂಚತ್ತಾಯರಿಗೆ ಮದೂರು ಶಿವನಾರಾಯಣ ಸರಳಾಯರ ಮನೆಯಲ್ಲಿದ್ದ ತುಳುಲಿಪಿಯ ತಾಳೆಗರಿಯ ಕಟ್ಟೊಂದು ದೊರುಕುವ ಹೊತ್ತಿಗೆ ಆ ಅಂಧಕಾರದ ಇತಿಹಾಸಕ್ಕೆ ಪರದೆ ಬಿತ್ತು. ತುಳುವಿನ ಸುವರ್ಣಯುಗ, ತುಳು ಸಾಹಿತ್ಯದ ಪುನರುತ್ಥಾನವಾಯಿತು. 

ಆ ತಾಳೆಗರಿಯ ಕಟ್ಟಿನಲ್ಲಿ ಅಡಗಿತ್ತು ಶ್ರೀ ಭಾಗವತೊ ಎಂಬ ಅಪೂರ್ವ ಗ್ರಂಥ. ತುಳು ಭಾಷೆಯಲ್ಲಿ, ತುಳು ಲಿಪಿಯಲ್ಲಿ ಬರೆದ ತುಳು ಪರಂಪರೆಗೆ ಹೊಸ ಭಾಷ್ಯ ಬರೆದ ಗ್ರಂಥ.  ವಿಷ್ಣುತುಂಗ ಎಂಬ ಕವಿ 17ನೇ ಶತಮಾನದಲ್ಲಿ  ಪಳಂತುಳುವಲ್ಲಿ ರಚಿಸಿದ ಭಾಗವತ ಕಾವ್ಯ, ತುಳುವಿನ ಚಿದಂಬರ ರಹಸ್ಯಕ್ಕೆ ಕೀಲಿಕೈ ನೀಡಿತು. ಕನ್ನಡದಲ್ಲಿರುವಂತೆ ಭಾಷಾ ಕಾಲಘಟ್ಟಗಳು ತುಳುವಲ್ಲಿಯೂ ಇವೆಯೆಂದು ಸಾಬೀತಾಯಿತು. ಈ ಕೃತಿಯಲ್ಲಿ ಬಳಸಿದ ತುಳುಭಾಷೆ, ಪ್ರತ್ಯಯಗಳು, ಸಂಧಿ-ಸಮಾಸಗಳು ಪ್ರಸ್ತುತ ತುಳುವಿಗಿಂತ ಬಹಳ ಭಿನ್ನವಾಗಿದ್ದು, ಈ ತುಳುವಿನ ಪ್ರಕಾರವನ್ನು ವಿದ್ವಾಂಸರು ಪಳಂತುಳು(ಹಳೆಯ ತುಳು) ಎಂದು ಕರೆದರು.ಶಾಸ್ತ್ರೀಯವಾಗಿ ಛಂದಸ್ಸಿನ ರಚನೆ, ಸಂಸ್ಕೃತ ವೃತ್ತಗಳ ಬಳಕೆ, ತುಳುವಿಗಾಗಿಯೇ ವೃತ್ತಗಳ ರಚನೆ ಹೀಗೆ ಕೇವಲ ಒಂದೇ ಕಾವ್ಯದಲ್ಲೇ ತುಳುವಿನ ಶ್ರೀಮಂತ ಸಾಹಿತ್ಯ ಯಾರೂ ಊಹಿಸದಂತಾ ರೀತಿಯಲ್ಲಿ ತೆರೆದುಕೊಂಡಿತು.

ಒಮ್ಮೆ ಭಾಗವತ ದೊರೆತ ಕೂಡಲೇ ತುಳುವಿಗೆ ಶಿಷ್ಟಸಾಹಿತ್ಯ ಪರಂಪರೆ ಇರುವ ಮನದಟ್ಟು ಸಂಶೋಧಕರಿಗೆ ಆಯಿತು. ತದನಂತರ ಪುಣಿಂಚತ್ತಾಯರು ಬೆಳಕಿಗೆ ತಂದ ಕೃತಿಯೇ 'ಕಾವೇರಿ' . ಸ್ಕಂದ ಪುರಾಣದ ಕಾವೇರಿ ಮಹಾತ್ಮೆಯ ತುಳು ರೂಪವೇ ಈ ಕಾವೇರಿ ಕಾವ್ಯ. ಈ ಕಾವ್ಯದ ತಾಡೆವಾಲೆಯ ಅನೇಕ ಭಾಗಗಳು ನಷ್ಟಹೊಂದಿ ಓದಲಾಗದ ಪರಿಸ್ಥಿತಿಯಲ್ಲಿದ್ದುದರಿಂದ ಮತ್ತು ಮೊದಲ ಕೆಲವು ಭಾಗಗಳು ಸಂಪೂರ್ಣ ಹಾಳಾಗಿದ್ದುದರಿಂದ ಈ ಕಾವ್ಯವನ್ನು ರಚಿಸಿದವರ್ಯಾರೆಂದು ತಿಳಿಯುವುದಿಲ್ಲ. ಈ ಕೃತಿಯ ಪ್ರಸ್ತಾವನೆಯನ್ನು ಬರೆಯುತ್ತಾ ಪುಣಿಂಚತ್ತಾಯರು ತುಳು ಲಿಪಿಯ ಕುರಿತು ಇದ್ದ ಸಂಶಯವೊಂದು ಪರಿಹರಿಯಿತು, ಹೆಸರಿಗಷ್ಟೇ 'ತುಳು ಲಿಪಿ' ಎಂದು ಕರೆಯದೆ, ತುಳು ಭಾಷೆಯ ಬಳಕೆಗೂ ಉಪಯೋಗಿಸಿದುದರ ಸಾಕ್ಷಿ ದೊರೆತು ತುಳುವಿಗೆ ಲಿಪಿಯಿಲ್ಲ ಎಂಬ ವಾದಕ್ಕೆ ಮತ್ತು ತುಳು ಲಿಪಿ ಸಂಸ್ಕೃತ ಗ್ರಂಥಗಳಿಗಾಗಿರುವ ಲಿಪಿಯೆಂಬ ವಾದಕ್ಕೆ ಪೂರ್ಣವಿರಾಮ ಬಿತ್ತು ಎಂದಿದ್ದಾರೆ. ಕಾವೇರಿಯಲ್ಲಿ ಬಳಸಿದ ಭಾಷೆಯ ಆಧಾರದ ಮೇಲೆ ಈ ಕೃತಿಯ ಕಾಲಘಟ್ಟವೂ 17ನೇ ಶತಮಾನವೆಂದು ನಿರ್ಧರಿಸಲಾಯಿತು. ಭಾಗವತವನ್ನು ಬರೆದ ವಿಷ್ಣುತುಂಗ ಕನ್ನಡದ ಭಾಗವತದಿಂದ ಪ್ರಭಾವಿತನಾಗಿದ್ದ ಮತ್ತು ಕನ್ನಡ ಲಿಪಿಯನ್ನು ಬಲ್ಲವನಾಗಿದ್ದ ಹಾಗಿದ್ದರೂ ಆತ ತುಳು ಲಿಪಿಯನ್ನು ಭಾಗವತ ಬರೆಯಲು ಬಳಸಿದ ಕಾರಣವೇನೆಂದು ತಿಳಿಸುತ್ತಾ, ವಿಷ್ಣುತುಂಗ ತುಳುಲಿಪಿ ಕ್ರಾಂತಿ ನಡೆಸಿದ ಎಂದು ಪುಣಿಚಂತ್ತಾಯರು ಆತನನ್ನು ಹೊಗಳುತ್ತಾರೆ. 
ಹಾಗಾದರೆ ತುಳುವಿನ ಶಿಷ್ಟ ಸಾಹಿತ್ಯ ಪರಂಪರೆ ಕೇವಲ 400ವರ್ಷಗಳಷ್ಟೇ ಹಳೆಯವೇ? ತುಳು ಲಿಪಿಯ ಬಳಕೆ 17ನೇ ಶತಮಾನದಲ್ಲಿ ಬಂತೇ ಎಂಬ ಜಿಜ್ಞಾಸೆ ಬೆಳೆಯುವ ಹೊತ್ತಿಗೆ ಬೆಳಕಿಗೆ ಬಂತು ದೇವಿ ಮಹಾತ್ಮೆ. ತೆಂಕಿಲ್ಲಾಯ ವಂಶಸ್ಥನೋರ್ವ ಬರೆದ ದೇವಿ ಮಹಾತ್ಮೆ ಗದ್ಯ ಕೃತಿಯಾಗಿದ್ದು, ಇದರ ಕಾಲಘಟ್ಟ 14ನೇ ಶತಮಾನ. ಮಾರ್ಕಂಡೇಯ ಪುರಾಣದಲ್ಲಿರುವ ದೇವಿ ಮಹಾತ್ಮೆ ಈ ಕೃತಿಯ ಕಥಾವಸ್ತು. ಇದರಲ್ಲಿ ಬಳಸಿದ ಭಾಷೆ ಭಾಗವತೊ, ಕಾವೇರಿಯಂತೆ ಕಾವ್ಯಾತ್ಮಕವಾಗಿರದೆ ಗದ್ಯರೂಪದಲ್ಲಿರುವುದರಿಂದ ತುಳುವಿನ ಗದ್ಯಸಾಹಿತ್ಯದ ಪರಂಪರೆಗೆ ನಾಂದಿಯಾಯಿತು.ಭಾಗವತೊ, ಕಾವೇರಿಗಳ ಭಾಷಾ ಪ್ರಯೋಗಗಳಿಗಿಂತಲೂ ಪ್ರಾಚೀನ ರೂಪದ ತುಳು ಇದರಲ್ಲಿ ಬಳಕೆಯಾಗಿದೆ. ಅಲ್ಲಿಗೆ ತುಳುವಿನ ಸಾಹಿತ್ಯ ಪರಂಪರೆ ಕನಿಷ್ಠ 700 ವರ್ಷಗಳಷ್ಟಾದರೂ ಹಳೆಯದು ಎಂಬ ವಿಚಾರ ಮನದಟ್ಟಾಯಿತು. ತುಳು ಲಿಪಿಯ ಬಳಕೆಯ ಕುರಿತು ಇದ್ದ ಅನೇಕ ಮೂಢನಂಬಿಕೆಗಳೂ ಮರೆಗೆ ಸರಿದವು. 
ಇದುವರೆಗಿನ ಎಲ್ಲಾ ತುಳು ಸಾಹಿತ್ಯ ಸಂಶೋಧನೆಗೆ ಬಂಗಾರ ಚುಕ್ಕೆಯಿಟ್ಟಂತೆ ಪುಣಿಚಂತಾಯರು ಬೆಳಕಿಗೆ ತಂದ ಅಪೂರ್ವ ಕಾವ್ಯವೇ ತುಳು ಮಹಾಭಾರತೊ. ಅರುಣಾಬ್ಜನೆಂಬ ಕಾವ್ಯನಾಮದ ಕವಿ, ಶಿವಾ ನೆಡುಂಬುರಾರ್ ಸಮಕಾಲೀನ 14ನೇ ಶತಮಾನದಲ್ಲಿ ಬರೆದ ತುಳುವಿನ ಶ್ರೇಷ್ಠ ಕೃತಿಯೇ ಮಹಾಭಾರತ. ಈ ಕಾವ್ಯದಲ್ಲಿ ಆತ ಪೂರ್ವಕವಿಗಳನ್ನೂ ಸ್ಮರಿಸುತ್ತಾ 'ತೆಳಿವುಳ್ಳಾಕುಳು ಭೂಮಿ ತುಳೈ ರಾಮಾಯಣೊ ಕಾವ್ಯೊ ತುಳುಭಾಷೆ ಕವಿಕುಳು ವಿಸ್ತರಿತೆರೈಯೇರ್' ಎಂದು ತನಗಿಂತ ಮೊದಲು ತುಳುವಲ್ಲಿ ರಾಮಾಯಣವನ್ನು ಬರೆದ ಕವಿಗಳನ್ನು ಸ್ಮರಿಸಿದ್ದಾನೆ, 'ಕವಿಕುಳು' ಎಂದು ಆತ ತಿಳಿಸಿರುವುದರಿಂದ ಈ ಮೊದಲು ತುಳುವಿನಲ್ಲಿ ಒಬ್ಬನಿಗಿಂತ ಹೆಚ್ಚು ಜನ ರಾಮಾಯಣವನ್ನು ಬರೆದಿರಬಹುದು ಎಂದು ಊಹಿಸಬಹುದು. ಗುಡ್ಡೆತರಾಯನೆಂಬ ಕವಿ ರುಕ್ಮಿಣೀ ಸ್ವಯಂವರ, ಬಾಣಾಸುರ ವಧೆ, ಕೀಚಕ ವಧೆಗಳೆಂಬ ಕೃತಿಗಳನ್ನೂ , ಓರ್ವ ಹಿರಿಯ ಕವಿ ಏಕಾದಶುಪವಾಸಂತ್ಯ ಕಾವ್ಯವನ್ನು ತುಳುವಲ್ಲಿ ರಚಿಸಿದ್ದಾರೆಂದೂ ತಿಳಿಸಿದ. ಇದರ ಮೂಲಕ ತುಳುವಿನಲ್ಲಿ 14ನೇ ಶತಮಾನಕ್ಕಿಂತಲೂ ಪೂರ್ವದಲ್ಲಿ ಪರಂಪರಾಗತ ಸಾಹಿತ್ಯ ಸೃಷ್ಟಿಯಾಗಿರುವುದು ಸ್ಪಷ್ಟವಾಗಿದೆ. 
ಅದೇ ಕಾಲಘಟ್ಟದಲ್ಲಿ ಹರಿಯಪ್ಪನೆಂಬ ಅರಸ 14ನೇ ಶತಮಾನದಲ್ಲಿ ರಚಿಸಿದ ಕರ್ಣಪರ್ವ ಎನ್ನುವ ಕೃತಿಯನ್ನು ರಚಿಸಿದ, ಹರಿಯಪ್ಪ ವಿಜಯನಗರ ಸಾಮ್ರಾಜ್ಯದ ಅರಸ ಎರಡನೇ ಹರಿಹರನೆಂದು ಸಂಶೋಧಕರ ಅಭಿಪ್ರಾಯ. ಇವಷ್ಟೇ ಅಲ್ಲದೆ 'ಅ ಗ್ರಾಮರ್ ಆಫ್ ದಿ ತುಳು ಲ್ಯಾಗ್ವೇಂಜ್' ಎಂಬ ಗ್ರಂಥದಲ್ಲಿ ರೆವರೆಂಡ್ ಜೆ.ಬ್ರಿಗೆಲ್ ರವರು ಒಂದು ತುಳು ಪ್ರಾಚೀನ ಕಾವ್ಯದ ಕೆಲವು ವೃತ್ತಮಾಲೆಗಳನ್ನು ತಿಳಿಸಿದ್ದಾರೆ. ಇದೂ ಕೂಡ ಯಾವುದೋ ಒಂದು ಕಾವ್ಯದ ಭಾಗವಾಗಿರುವ ಸಾಧ್ಯತೆಯಿದೆ.
19ನೇ ಶತಮಾನದಲ್ಲಿ ಬಾಸೆಲ್ ಮಿಷನ್ ಕನ್ನಡ ಮುದ್ರಣಯಂತ್ರ ಮಂಗಳೂರಿನಲ್ಲಿ ಪ್ರಾರಂಭಿಸಿದ ನಂತರ ತುಳು ಲಿಪಿ ಜನಮಾನಸದಿಂದ ಮರೆಯಾಗಿ ತುಳು ಕೃತಿಗಳು ಕನ್ನಡ ಲಿಪಿಯಲ್ಲಿ ಪ್ರಕಟವಾಗತೊಡಗಿದವು. ಹಳೆಯ ಒಡಂಬಡಿಕೆ, ಕೃಸ್ತ ಕೀರ್ತನೆಗಳು, ಬೈಬಲ್, ತುಳು-ಇಂಗ್ಲೀಷ್ ನಿಘಂಟು, ತುಳು ಗಾದೆಗಳು, ಪಾಡ್ದನಗಳು, ತುಳು ವ್ಯಾಕರಣ ಹೀಗೆ ಅನೇಕ ಕೃತಿಗಳನ್ನು ಮಿಷನರಿಗಳೇ ಆಸಕ್ತಿವಹಿಸಿ ಸಂಗ್ರಹಿಸಿ ಪ್ರಕಟಿಸಿ ತುಳುವಿನ ಬೆಳವಣಿಗೆಗೆ ಸಹಕಾರಿಯಾದರು.

ತುಳು ಮೌಖಿಕ ಭಾಷೆ, ತುಳು ಸಾಹಿತ್ಯ ರಚನೆಗೆ ಸೂಕ್ತವಲ್ಲದ ಭಾಷೆ ಎಂದು 20ನೇ ಶತಮಾನದಲ್ಲಿ ವಿದ್ವಾಂಸರು ವಾದಿಸುತ್ತಿದ್ದರೆ, ಅವರಿಗಿಂತ ಮುನ್ನೂರು ವರ್ಷ ಮೊದಲೇ ವಿಷ್ಣುತುಂಗ 'ವೇದೊಂಕುಳೆ ಸಾರೊನು ತುಳು ಭಾಷೆಡ್ ಪನ್ಪೆ' ಎಂದು ಹೇಳಿರುವುದು ಇವರ ಎಲ್ಲಾ ತಲೆಬುಡವಿಲ್ಲದ, ಭಾಷಾ ಮೇಲರಿಮೆಯ ಅಹಂ ಧೋರಣೆಗೆ ಪೂರ್ಣವಿರಾಮ ನೀಡುತ್ತದೆ.
ಇನ್ನು ತುಳು ಲಿಪಿಯಲ್ಲಿರುವ ಐವತ್ತಕ್ಕೂ ಹೆಚ್ಚು ಶಾಸನಗಳು ತುಳು ಬರವಣಿಗೆಯ ಸಾಧ್ಯತೆಗಳನ್ನು 10ನೇ ಶತಮಾನದಾಚೆಗೆ ಕೊಂಡೊಯ್ದಿರುವುದು ಸತ್ಯ. ತುಳು ಲಿಪಿ-ಸಾಹಿತ್ಯಕ್ಕೆ ಸಾವಿರ ವರ್ಷಗಳ ಇತಿಹಾಸವಿರುವುದು ನಮ್ಮ ಮುಂದಿದೆ. ಇನ್ನೂ ಅದೆಷ್ಟೊ ಕೃತಿ, ಶಾಸನಗಳು ಕಾಲನ ಹೊಡೆತಕ್ಕೆ ಸಿಕ್ಕಿ ಮರೆಯಾಗಿದೆಯೊ ಗೊತ್ತಿಲ್ಲ.
ರಾಗಬದ್ಧವಾಗಿ ಸಂಧಿ ಪಾಡ್ದನ ರಚಿಸಿದ ತುಳುವರು, ಛಂದಸ್ಸುಬದ್ಧವಾಗಿ ಸಾಹಿತ್ಯ ಪರಂಪರೆಯನ್ನೂ ಸೃಷ್ಟಿಸಿದರು. ಯಾವುದೇ ರಾಜಾಶ್ರಯವಿಲ್ಲದೆ ಇದ್ದರೂ ಸಾವಿರಾರು ವರ್ಷಗಳಿಂದ ತುಳು ಭಾಷೆ ಅಳಿಯದಂತೆ ಹೃದಯದಲ್ಲಿಟ್ಟು ಪೋಷಿಸಿದರು. ತುಳುವಪ್ಪೆಯ ಸಿರಿಮುಡಿಗೆ ಮುಡಿಸಿದ ಎಳೆ ಪಿಂಗಾರದಂತೆ ಎಸಳೆಸಲಾಗಿ ತುಳುವಿನ ಖ್ಯಾತಿ ಹಬ್ಬಿ ಮುದೊಂದು ದಿನ ತುಳುವಿಗೆ ಇದುವರೆಗೆ ಆದ ಸಂವಿಧಾನಿಕ ಅನ್ಯಾಯಕ್ಕೆ, ತುಳುವಿಗೆ ದೊರೆಯದ ರಾಜ್ಯ, ರಾಷ್ಟ್ರದ ಮಾನ್ಯತೆಗೂ ತೆರೆಯೆಳೆದು ನ್ಯಾಯ ಒದಗಬೇಕು. ಶಾಸ್ರ್ತೀಯ ಭಾಷೆಯಾಗಬೇಕಿದ್ದ ತುಳು ಇನ್ನೂ ತನ್ನ  ಸಾಂವಿಧಾನಿಕ ಮಾನ್ಯತೆಯ ಓಟಕ್ಕೆ ಅಂಬೆಗಾಲಿಡುತ್ತಿರುವುದು ಕಳೆದ ಎಪ್ಪತ್ತು ವರ್ಷಗಳಿಂದ ಪ್ರಜಾಪ್ರಭುತ್ವವೆಂದು ನಮ್ಮನ್ನು ಆಳುತ್ತಿರುವ ಜನಪ್ರತಿನಿಧಿಗಳು ಮತ್ತು ಸರಕಾರಗಳ ಬೇಜವಬ್ದಾರಿತನಕ್ಕೆ ಸಾಕ್ಷಿ.
ಜೈ ತುಳುವಪ್ಪೆ

Tuesday, August 18, 2020

Ancient Tulu Literature - Classical Tulu

 Back in the history around 19th and 20th century there were a huge conception about Tulu as a non-literary, oral language. Though many historians and linguistic researchers had an opinion that Tulu is highly developed but there was a vacuum for non-availability of significant ancient literature in Tulu.

It was in 1969s when Shri.Venkataraja Puninchathaya accidentally discovered a bundle of palm leaves at the resident of Madhur Shivanarayana Saralaya, entire world has witnessed a history. Forgotten history, history that was buried in the game of transformations, history that was never heard off in the past. It unveiled a new set of researches and it has enlightened the new path to Tulu classics.

(Photo : P. Venkataraja puninchathaya, Great man who discovered Tulu classics)

 

Shri Bhagavatho

With the great difficulty Venkataraja Puninchathaya decoded the Palm leaves written in Tulu script and Tulu language, and there!Tulu obtained it's first classic Shri Bhagavatho.

Shri Bhagavatho was written by a poet named 'Vishnu Thunga'. The language used in this epic is considered as an old classical Tulu which bears great difference with modern Tulu. Vishnu Thunga has given his almanac in the poem, that helped the researchers to decipher the exact date of the classic. According to the astrological experts date comes to be A.D 1636 ( 17th Century)

Discovery of Shri Bhagavatho has opened many dimensions of Tulu classic literature and there after series of Tulu classics came into limelight.

Kaveri

A new history was written when Mangalore University published Shri Bhagavatho in 1984. This led to the discovery of yet another Tulu classic named 'Kaveri'

Most part of the Kaveri is lost and only few parts were available during the time of discovery. Hence we don't have any information regarding the poet.According to the almanac given in the poem, it is being said that it was written by a Brahmin poet in 'Prajothpatti Samvathsara' . Considering the language of the classic, it showed great resemblance to that of Shri Bhagavatho. Hence the Kaveri is considered to be written in 17th Century.

Devi Mahathme

One of the oldest Tulu classic writing is Tulu Devi Mahathme. It was a first prose literature written in Tulu.  Language of Devi Mahathme is quite different from that of Bhagavatho or Kaveri. The writer is identified to be belonging to the lineage of 'Thenkkillaya'. According to the language used and the history of Thenkillaya family, it was noted that the Devi Mahathme is written in 14th century.

Mahabharatho

Yet another Tulu classic revealed a great literary tradition of Tulu in ancient times. The epic Tulu Mahabharatho was written by a poet named 'Arunabja'. Beauty of this epic is, it revealed traditional literary customs of Tulu language. In the epic Arunabja has mentioned the poets preceding him. He said that there were many poets preceding him had written 'Tulu Ramayana' .Also, he mentions a poet named 'Guddetharaya' and his works are being 'Rukmini Swayamvara', Banasura vadhe', Keechaka vadhe' ( These classics have not discovered yet) in Tulu. Arunabja also remembers an elderly poet who wrote 'ekaadashupavasantha kavyo'. 

The great reveal by the Arunabja has given a significant light on the ancient literary traditions of Tulu language and also uncovered many hidden classics.

Tulu Mahabharatho belongs to 14th Century ( Arunabja belongs to the same era of Shiva Nedumburar, an inscription dating A.D 1382 of Shiva Nedumburar is obtained in Udupi)

Generation of poets revealed by Arunabja has suggested that tradition of Tulu classical literature can be dated back to 12th Century or earlier.

Tulu Karnaparwo

One of the major finding of Tulu classical literature is Tulu karnaparwa. It is written by a poet named 'Hariappa', historians identified him to be the king of vijayanagara Empire Harihara-II. Arunabja mentions about Hariappa to be a King of his time, also he mentions that he has written the Mahabharato excluding the parts of Sambhava parva which was written by our King Hariappa. According to the Almanac written in poem the date is predicted as A.D 1380. Hariappa also mentions that many Tulu classics were written before him.


Major misconception of Tulu being a non-literary, non-classical language has wiped out by the discovery of these classics. Tulu was a literary language at-least from 12th Century. Current discoveries of inscriptions written in Tulu script and language belonging to 10th century has given one more insight on antiquity of Tulu. Tulu has a traditional writing custom from thousands of years. 

Many classics of Tulu mentioned in Mahabharatho has not yet discovered. There might be a chance of them getting completely lost in the history. All available Tulu classics are transcribed into Kannada script from original Tulu script and got published by various publication houses. 

Not enough research has been done towards Tulu classics, who knows there might be many classics hidden, undiscovered. Let us hope that we find many more ancient Tulu classics and the classical Tulu can be unfolded further.


Image and content credits :

http://puninchathaya.com/gallery.html


 

 

 

 



Friday, June 12, 2020

How Tulu is related to a Pakistani Language?

Title of this article might surprise many, one would think what might be the relationship between a south Indian language Tulu and that a language spoken in Pakistan.

As we all know Tulu is an ancient language spoken mainly in Tulunad region spread across the state of Karnataka and Kerala. The language has it's own script with rich oral and written traditions. Earliest available inscription of Tulu language and script is dated back to 10th century(A.D 980), after that we have seen consistent effort by local chieftains to publish many inscriptions in Tulu language. Tulu has close association with it's sister languages of Dravidian branch. According to the linguists Tulu has separated from it's parent language at very early stage and isolated in the region bordering Western ghat and Arabian sea, this is evident by the fact that Tulu still retains many features of the proto-dravidian language and least affected by the influence of other languages. Robert Caldwell in his pioneered work regarding the comparative study of Dravidian languages quoted that "Tulu is one of the most highly developed languages of the Dravidian family".

Dravidian languages are not just limited to the Southern India. There are many groups of people who speak Dravidian languages are situated in the parts away from current Dravidian homeland. One such language is Brahui.
Brahui is spoken primarily in the central part of Balochistan province in Pakistan. Linguists have identified it to be belonging to the northern branch of the Dravidian language family.

There are many articles comparing the Brahui with Tamil/Kannada/Telugu.Number of books have been written on comparative study of various Dravidian languages with Brahui. But one could find no article written on the Tulu-Brahui relationship. In this article I have hinted some of the possible relationship between Tulu and Brahui through some closely related words. some extensive study is needed in this area to understand the significant relationship between these languages.

English        -    Brahui       -       Tulu
Two                    irat                    radd
Three                 musi                   mūji
Eye                    xan                     kann
Scorpion            tels                     tel
Blood                ditar                    netter
Bow                   bil                      biru
Mouth                ba                      bāyi
Water                 dīr                      nīr
Stone                  xal                     kal
Room                 koti                    kotya
the next day       elo de                 elle dina
Grass                  bei                     bei
Desert                parr                    padir/pādi
Crow                 khakho               kakke
Dung                 pi                        pi
Elder                 balla                    malla
Say                    pan                     pan
He                      aey                      aye
Today                aehno                   ini
How much          ath                     eth
Who                    dher                    yer
Come                 barr                      bala
Cat                      pishy                    pucché
Worm                  pu                        puri
Bridge                 pal                        pāmpu
Vomiting              kai                        kakk
Collapse               burring                būru
Demolish             darefing                darpu
Snore                  kurrukav                korepu
Grass                   puttar                    pajir
Milk                    palh                        pēr
Wood                    pal                        palayi
You                                                ē

If one consider the number system of Brahui only Two-irat ( radd/Tulu, eradu/Kannada) and Three-musi/musit( mūji/Tulu, mūru/kannada, mūn/Tamil) are of Dravidian origin, rest of the numbers seems to be a borrowing from Indo-Aryan languages. Due to it's isolation from other languages of same family, it has lost most of its original words and as per the linguists it has retained only 15% of Dravidian rooted words. It's grammar and structure too are greatly influenced by Indo-Aryan languages surrounding it.

As listed above one could see many similar words between Tulu and Brahui, even retention of 'pa' sound is significant in both of these languages. This gives light to entirely a new set of observations. Linguists have compared Brahui with many prominent languages of south India, now if they concentrate on comparing Brahui with Tulu they might find many missing links and it will be a hot topic for linguistic researchers to explore.

Tulu is one such language always missed from the arena of linguistic spectra and with many hidden secrets within it. Misconception of Tulu being a non-independent language is widespread even though scholars have clearly rejected any such claim and also identified Tulu to be one of the ancient languages with a history of more than 2000 years.

This article was intended to provide the glimpse and explore the possibility of having a link between Tulu-Brahui. I sincerely wish someone take up this as a reference and do more research on the relationship between Tulu and Brahui language.
                            
- Mahi


(Image souce : downloaded from Internet, credit to the respective owner) 



Friday, May 29, 2020

ಲಕ್ಕ್ ಲೆ ತುಳುವೆರೆ, ತುಳುನಾಡ್ ಒರಿಪಾಲೆ

ಮಿತ್ತ್ ನೀಲಿ ಆಕಾಶೊದ ಕುಬಲ್, ಸುತ್ತ ಪಡ್ಡಾಯಿ ಘಟ್ಟೊದ ಕೋಟೆ, ಅಟಾರ ಸೋಜಿಗದ ಕಡಲೇ ಜಾಲ್, ಸಾಲ್ ಸಾಲ್ ಕಂಗ್, ತಾರೆ, ಬಾರೆಲ್ನ ತೋಟ, ಅಲ್ಪಲ್ಪ ತೋಜುನ ಒಡಿಲ್ದ ಇಲ್ಲುಲು, ಪೆತ್ತ ಕೈ ಕಂಜಿ,ಸಾನೊ-ಗುಂಡ, ನಾಗ ಬನ ದೈವ ದೇವೆರ್, ಉಂದೇ ಎನ್ನ ಪೊರ್ಲಗಂಟ್ದ ತುಳುನಾಡ್.

ಕುಡ್ಲ - ಒಡಿಪು-ಕಾಸ್ರೋಡು, ಮಂಗಳೂರು ರಾಜ್ಯ-ಬಾರ್ಕೂರು ರಾಜ್ಯ, ಆಳುಪೆರ್-ಸಾವಂತೆರ್-ಚೌಟೆರ್-ಬಂಗೆರ್-ಬಳ್ಳಾಲೆರ್,ಸತ್ಯನಾಪುರೊತ ಅಪ್ಪೆ ಸಿರಿ, ಒರಿ ಕುಮಾರೆ, ಸೊನ್ನೆ-ಗಿಂಡೆ, ಅಬ್ಬಗ-ದಾರಗೆರ್,ಮುಲ್ಕಿ ಸೀಮೆದ ಬೀರ ಬಾರೆರ್,ಸತ್ಯೊಡು ಬತ್ತಿನಕಲೆಗ್ ತಿಗಲೆಡ್ ಸಾದಿ ಕೊರಿನ ಕೋಟಿ-ಚೆನ್ನಯೆರ್, ಅಜಾನುಬಾಹು ಅಗೋಳಿ ಮಂಜಣ್ಣೆ, ಕಪಟದಾಂತಿ ಕಲ್ಕುಡೆ, ಅನ್ಯಾಯೊನು ದಂಟ್ ದ್ ನ್ಯಾಯೊಗು ತರೆ ಕೊರಿನ ಬಬ್ಬು, ಕಟೀಲ್ದಪ್ಪೆ ಕಾರ್ ಊರಿನ ಜಾಗ, ಪಂಚದುರ್ಗೆಲು ನೆಲೆಯಾಯಿನ ಬಪ್ಪನಾಡ್, ಧರ್ಮೊನೇ ಭೂಲೋಕೊಗು ಜತ್ತ್ ಬತ್ತಿನ ಕುಡುಮ,ಕನಕಗ್ ಒಲಿಯಿನ ಒಡಿಪುದ ಕೃಷ್ಣೆ, ಭಕ್ತಿಗ್ ಮೆಚ್ಚಿದ್ ಉಂಡಿನ ಉಂಡಾರ್ದ ವಿಷ್ಣುಮೂರ್ತಿ, ಪುತ್ತೂರ ಮಹಾಲಿಂಗೇಶ್ವರೆ, ರಾಜನ್ ದೈವ ಜುಮಾದಿ-ಜಾರಂದಾಯೆ,ತಿಬಾರ ಕೊಡಮಣೆತ್ತಾಯೆ,ಸಾರ ಮಾನ್ಯ ದೈವೊಲು ನೆಲೆ ಊರಿನ ಜಾಗ ಉಂದು, ನಮ್ಮ ತುಳುನಾಡ್.

ಅರಲ್ದಿ ಪುರ್ಪದ ಲೆಕ್ಕ, ಬೊಳ್ಳಿ ಮೆನ್ಕುನ ಲೆಕ್ಕ, ಪರಪುನ ಸೆಲಿ ನೀರ್ದಲೆಕ್ಕ, ಬೊಳ್ಯನೆ ನೊರೆ ನೊರೆ ಪೇರ್ದಲೆಕ್ಕ ಉಪ್ಪುನ ಭಾಷೆ ನಮ್ಮ ತುಳು. ವಾ ಅನಾದಿ ಕಾಲೊಡು ಈ ಭೂಮಿದ ಉದಯವಾಂಡಾ, ವಾ ಕಾಲೊಡು ಮನುಷ್ಯೆರ್ ಪದೊಕುಲೆನ್ ಒಟ್ಟು ಪಾಡ್ದ್ ಭಾಷೆನ್ ಪುಟ್ಟಾಯೆರಾ, ಆ ಏನಿ ಕಾಲೊರ್ದಿಂಚಿ ಇತ್ತಿನ ಭಾಷೆ ನಮ್ಮ ತುಳು. ಸಾರ ಜನೊಕುಲು ತೊರ್ತೆರ್, ಏತೋ ರಾಜೆರ್ ನಮ್ಮ ದೊಂಡೆಗ್ ಬೇತೆ ಭಾಷೆಲೆನ್ ತಲ್ಲಾಯೆರ್, ಕಟ್ಟಿ ಸೆರಂಗ್ದ ಗಂಟ್ ಡ್, ಬೆಚ್ಚ ಮಟ್ಟೆಲ್ಡ್ ದೆಂಗಾವೊಂದು ಒರಿತೊಂದು ಬತ್ತ ನಮ ಈ ಭಾಷೆನ್. ರಾಜೆರೆ ಕಾಲ ಪೋಂಡು, ಪ್ರಜೆಕುಲು ರಾಜೆರಾಯೆರ್, ದೇಶೊದ ಕಲ್ಪನೆ ಬತ್ತ್ಂಡ್, ಅಖಂಡ ಭಾರತ ಆಂಡ್, ಒಂಜಿ ತುಂಡು ಅರಿವಾಣೊದಾತ್ ಮಲ್ಲ ತುಳುನಾಡ್ ನ್ ಒಡೆಗ್ ಗೊಡ್ಯಾವುನುಗೆ?  ತುಳುವೆರ್ ಮಲ್ಲ ಉಡಲ್ದಕುಲು! ಎಂಕುಲು ಬೇತೆನೇ ಉಪ್ಪುವ ಪಂಜೆರ್.ಪೇರ್ಗ್ ನೀರ್ ಸೇರಿಲೆಕ್ಕ, ತುಡರ್ಗ್ ಎಣ್ಣೆ ಸಾಂಗ್ ಕೊರಿಲೆಕ್ಕ, ಭೂಮಿ ಆಕಾಶೊದ ಲೆಕ್ಕ ಒಟ್ಟುಗೇ ಉಪ್ಪುವ ಪಂದ್ ತನ್ನಿಲ್ಲ ಕುಬಲ್ನ್ ದರ್ತ್ ದ್, ರಡ್ಡ್ ಪಾಲ್ ಮಲ್ತ್ ದ್ ಪಟ್ಟಿಯೆರ್. 1956 ಕ್ಕ್ ತುಳುನಾಡ್ ದರಿಂಡ್, ಆಂಡಲಾ ತುಳುವೆರೆ ಮನಸ್ ದರಿಯಿಜಿ. ತುಳುವೆರ್ ವಾ ಒಂಜಿ ದಾಸ್ಯೊದ ಬದ್ಕ್ ನ್ ಬದುಕೊಂದಿತ್ತೆರ್ ಪಂಡ ತುಳು ಒಂಜಿ ಸ್ವತಂತ್ರ ಭಾಷೆನೇ ಅತ್ತ್, ಅವು ಕನ್ನಡದ ಉಪ ಭಾಷೆ ಪಂಡಲಾ ಮನಿತ್ಜೆರ್. ಪದ ಪದೊಕುಲು ದಿಂಜಿದಿ ಈ ಪೊರ್ಲಗಂಟ್ ದ ಭಾಷೆಗ್ ಆನಿಯೇ ಕೋಂಪರೆ ಗುಂಡಿ ಅಗೆಪುನ ಅಟ್ಟನೆ ಆಂಡ್. 
ಪಂಚ ದ್ರಾವಿಡ ಭಾಷೆಲೆಡ್ ತನ್ನವೇ ಆಯಿನ ಪುಗರ್ತೆನ್ ಪಡೆಯಿನ ಭಾಷೆ ಇನಿ ತಾದಿಗ್ ಬತ್ತ್ಂಡ್, ಸಾಲೆಡ್ ತುಳು ಕಲ್ಪುನ ದೂರದ ಪಾತೆರ ಆಂಡ್. ತುಳು ಪಾತೆರಿನೆಕ್ಕೇ ಸುಂಕ ಪಾಡಿಯೆರ್. ಈತ್ ಯಾವುಜಿ ಪಂದ್ ಒರಿದಿನ ತುಳುನಾಡ್ನ್ ರಡ್ಡ್ ತುಂಡು ಮಲ್ತ್ ಒಡಿಪು ಕುಡ್ಲನ್ ಬೇತೆ ಬೇತೆ ಮಲ್ತೆರ್. ಕುಡ್ಲ ಮಂಗಳೂರಾಂಡ್, ಒಡಿಪು ಉಡುಪಿಯಾಂಡ್, ಪೆಜಮಾಡಿ ಹೆಜಮಾಡಿಯಾಂಡ್,ಚಮತೂರು ಸಿಮಂತೂರಾಂಡ್, ಸಂಪಾಯಿ ಸಂಪಿಗೆಯಾಂಡ್, ಉಬಾರ್ ಉಪ್ಪಿನಂಗಡಿಯಾಂಡ್, ಲೆಕ್ಕೆಸಿರಿ ರಕ್ತೇಶ್ವರಿ ಆಯೊಲು, ಜುಮಾದಿ ಧೂಮಾವತಿಯಾಯೆ. ಅಲ್ಪಲ್ಪ ತುಳುತ ಓಂಟೆ ನಾಲಾಯಿಡ್ ಪತ್ ದ್ ಪೊಜೆಂಕಿಯೆರ್.
ಆ ತೆಂಬರೆದ ಸಬ್ದ ಓಲುಲಾ ಕೇನೊಂದಿಜ್ಜಿ. ಬಬ್ಬುನ ಬಾದೆಲಾ ಅಡೆಗೇ ಮದೆ ಸೇರ್ದ್ಂಡ್. ಕರ,ಬಿಸಲೆ, ಮುಗಾಯಿ,ಕಡ್ಯ, ಕುತ್ತರಿ, ಅಡ್ಯರ, ಬಾವಡಿಗೆ, ತಟ್ಟಿ ಕುಡ್ಪು, ಭರಣಿ, ಮುಡಿ ತುಪ್ಪೆಲಾ ತೋಜೊಂದಿಜ್ಜಿ. ನಮ್ಮ ಭಾಷೆನ್ ಮದತಿನತ್ತಂದೆ ನಮ್ಮ ಮೂಲೊನೇ ನಮ ಮದತನಾ? ನಾಗ ಬನೊಕು ಇತ್ತೆ ಉಚ್ಚು ಬರ್ಪುಜಿಗೆ, ಬೆರ್ಮೆರ್ ಯಾಪೊನೇ ಮೌನ ಆತೆರ್ಗೆ, ದೈವೊಲುಲಾ ಇತ್ತೆ ಸವಾರಿಗ್ ಪಿದಡುಜಗೆ, ಪೂಜಾರ್ಲೆನ ಇಲ್ಲಡ್ ಇತ್ತೆ ಕೊಡಿ ಇರೆಲಾ ತಿಕ್ಕುಜಿಗೆ, ಗುತ್ತುದ ಮನೆ ಮಂಚಾವುಗು ಉದಲ್ ಪತ್ದ್ಂಡ್ಗೆ, ಕೂಚಿದ ನೀರ್ಗ್ಲಾ ಪಾಮಾಜಿ ಪತ್ಂಡ್ಗೆ, ಬಡಕಾಯಿ ದೇವೆರ್ನಡೆ ಇತ್ತೆ ಏರ್ಲಾ ಪೋಪುಜೆರ್ಗೆ, ಮಾರಿಪೂಜೆಗಾದ್ ಕಾಪುಗು ಪೋವರೆಲಾ ಕಾಲ ಬರೊಂದಿಜ್ಜಿಗೆ, ಆಟಿ ಕಳಂಜೆ ಸ್ಟೇಜ್ ಸೇರ್ದೆಗೆ, ನೇಜಿ-ನಟ್ಟಿ ನಾಡ್ಂಡಲಾ ತಿಕ್ಕುಜಿಗೆ.

ಉಂದು ಲಕ್ಕೊಡಾಯಿನ ಪೊರ್ತು. ಭಾಷೆ ಒರಿಯೊಂಡಾದ ಪೊರುಂಬುಲೆ. ಭಾಷೆ ಉಪ್ಪಂದಿ ಸಂಸ್ಕೃತಿ ಪೊಟ್ಟು ತಾರೆದ ಮರತಲೆಕ್ಕ, ಅವುಲು ತಾರೆ ಉಪ್ಪುಂಡು ಆಂಡ ತಾರಾಯಿಡ್ ತಿರ್ಲ್ ಉಪ್ಪುಜಿ. ಜೈದಿನಕಲೆನ್ ತೊರ್ತುದು ಲಕ್ಕಾಲೆ. ತಾಲ್ದ್ ಪೋತಿ ಪದಕುಲೆನ್ ಒಟ್ಟು ಸೇರಾಗ, ಕುಡ ಪೊರ್ಲಗಂಟ್ದ ತುಳುನಾಡ್ ಕಟ್ಟ್ ಗ.ತುಳುಭಾಷೆ ಅಳಿಯೊರ್ದು ದುಂಬು ಒರಿಪಾಗ, ತುಳು ಮಣ್ಣ್ ದ ಪರಕೆ ಸಂದಾಗ. ಅಪ್ಪೆ ದಾಂತಿ ಬಾಲೆದ ಲೆಕ್ಕ ತುಳು ಇನಿ ಸೊರಗೊಂದುಂಡು, ಪಜೆ ಪತ್ತ್ದ್ಂಡ್ . ಕೊರ್ಪಿನಕುಲು ಕೊರ್ಜೆರ್ಡ ಒಯಿತ್ದ್ ಗೆತೊನ್ಗ. ಸತ್ಯೊಡಪ ಬತ್ತೆರ್ಡ ತರೆ ತಗ್ಗಾದ್ ಒತ್ತೊನುಗ, ಅನ್ಯಾಯೊಡು ಬತ್ತಿನಕ್ಲೆಗ್ ತುಳುವೆರೆ ಪಿಸಿರ್ ನ್ ತೂಪಾಗ.. ತುಳು ಒರಿಪಾಗ.. ತುಳು ಬುಲೆಪಾಗ.

- ಮಹಿ

ಕಲಿಯುಗದ ನರ್ತನ (K-1)

ನೂರು ದಾರಿಯ ಸುತ್ತ ವೃತ್ತದಂತಹ ಪರಿಧಿ
ಯಾರು ಹಾಯರು ಅತ್ತ ದಿಗಂತದಂಚಿನ ಶರಧಿ
ಕಂಡ ಕಣ್ಣುಗಳೇನು ಮಾತು ಉದುರಿಸುವುದೇನು
ಕಿವಿಯ ಟಮಟೆಯ ಸುತ್ತ ದೃಷ್ಠಿ ನೆಲೆಯುವುದೇನು
ಪದರ ಪದರದಿ ಅಡಗೆ ಸತ್ಯ ಹುದುಗಿಹುದು
ಮಿಥ್ಯದಾಟವೋ ಇದು ಕಲಿಯುಗದ ನರ್ತನ..

ಕೂಗಿ ಕರೆದರೆಂದು ಓಡಿ ಹೋಗುವ ಮೂಢ
ಕರೆದ ಧ್ವನಿಯಂಚಲಿ ಮೊಳಗಿತೇ ಸ್ವಾರ್ಥದ ಕಹಳೆ
ಮೀಟಿ ಸಾಸಿರ ತಂತಿ ಅಪಸ್ವರದ ನಾದಕ್ಕೆ 
ಬಾರಿಸೈ ದೇಹವೆಂಬ ಡಮರು ಏದುಸಿರ ತಾಳಕ್ಕೆ..

ಕೂಡಿ ಕಳೆವರು ಪ್ರಸ್ಥ ಮೈಮೇಲೆ ಎರಗೆರಗಿ
ಎದೆಯ ತೀಡುತ್ತಾ ಮಾಂಸದ ತೇಗು ಅಡಗಡಗಿ
ತೋಳ ತಬ್ಬಲು ಕಾಣೆ ಕಾಮ ಕರಗದ ಭೀತಿ
ಮಿಥ್ಯೆಯೈ ಮಧು ಸುಖವು ಹಿಪ್ಪೆ ಹಿಂಡಿದ ಹಾಗೆ..

ಗರ್ಭದೊಳಗೊಂದು ಕೂಸು ಹೆಣ್ಣೋ ಗಂಡೊ
ಅವಳೊಳಗೆ ಅವನಂತೆ ಬಿತ್ತಿ ಫಲ ಕಾತರಿಸುತ
ಪುಷ್ಪವೊಂದು ಸ್ಪರ್ಷವಾಗಿ ಫಲ ಉದಿಸೆ ಕಂಡಿರಾ
ಯೋನಿಯರಸುತ್ತಾ ಪರಪಂಚದೆಡೆ ಬಂದಿರಾ..

ಯಾರಾಕೆ ಅಬ್ಬೆಯೇ ಮೊಲೆ ನೀಡಿ ಸಲಹಿದವಳು
ಹರಿದಂಚಿನ ಅರಿವೆಯ ಕಟ್ಟಿ ಬೆಚ್ಚನೆಗೆ ಇಟ್ಟವಳು
ತೂಗುತ್ತಾ ತೆವಲತ್ತಾ ನೋವ ಮರೆಯುತ್ತಾ ಮುದಿಯೆ
ಯಾರಾಕೆ ನಂಟಳೇ ಅಂಟುತ್ತಾ ನಡೆದವಳು..

ಹಿರಿದಾದ ದೇಹಕ್ಕೆ ತುತ್ತು ಸಾಕಾಗದ ಹೊತ್ತು
ಮುತ್ತನರಸುತ್ತಾ ಕುದುರೆ ಹಿಮ್ಮಖ ಚಲಿಸಿದಾಗ
ಹಾರಾಡಿ ಏರಾಡಿ ಕಾಮ ಕದನದಿ ಹೊಯ್ದಾಡಿ
ನರಕವೋ ನಾಕವೋ ಕಂಡಿರಾ ಮಿಥ್ಯ ಸುಖವನ್ನು

ಕೂಡಿದವರು ಕಳೆವರು ಕೂಡಲು ಎರಡು ದೇಹ
ದೇಹ ಲಾಲಸೆ ಹೊತ್ತು ನಿರ್ಲಜ್ಜ ಮನ
ಮನದೊಳಗೆ ಹುದುಗಿದ್ದ ಆಸೆ ದುಗುಡದ ಪುಂಜ
ಧುತ್ತೆಂದು ಭೋರ್ಗರೆತು ಅಂಕೆ ಮೀರಿದ ಮನುಜ

ಪರಿಧಿ ದಾಟಲು ಇನ್ನೇನು ಹತ್ತೇ ಹೆಜ್ಜೆ
ಸುತ್ತಾಡಿ ಸುತ್ತಾಡಿ ಸ್ಥಾನ ಪಲ್ಲಟ
ಕೂಡಲು ಹೋದವ ಕೂಡಿ ಕೂಡಿ ಕೂಡುತ್ತಾ
ಮತ್ತೆ ಸೇರಿದೆ ಅದೇ ಗರ್ಭವ ತಿರುಗಿ, ಕತ್ತಲೆಯ ಕಾರಾಗ್ರಹ
ಪರಿಧಿಗದು ಅಂತ್ಯವಿಲ್ಲ ಪುನರ್ಸಂಭವಿಸುವುದು
ಕಾಲಚಕ್ರವದು ಕಲಿಯುಗದ ನರ್ತನ..
- ಮಹಿ

Thursday, May 14, 2020

ತಾಜ್ ಮಹಲ್ : ಪ್ರೀತಿಯೋ? ಉತ್ಪ್ರೇಕ್ಷೆಯೋ?

ಯಮುನಾ ನದಿಯ ತೀರದಲ್ಲಿ ಆ ಸುಂದರ ಕಲಾಕೃತಿಯು ಮುಗಿಲನ್ನೇ ನಾಚುವಂತೆ ಹೊಳೆಯುತ್ತಾ ಅಚಲವಾಗಿ ನಿಂತಿರುವುದನ್ನು ಕಾಣಲು ನನ್ನಂತಹ ಇತಿಹಾಸ ಪ್ರೇಮಿಗಳಿಗೆ ಎರಡು ಕಣ್ಣು ಸಾಲದು. ಇತಿಹಾಸದ ಪುಟಗಳನ್ನು ತಿರುವುತ್ತಾ ಒಮ್ಮೆ ಹಿಂತಿರುಗಿ ನೋಡಿದಾಗ ಅಲ್ಲಿನ ರಕ್ತ-ಸಿಕ್ತ ಬರಹಗಳ ಮಧ್ಯೆ, ಯುದ್ಧ-ಆಕ್ರಮಣಗಳ ಮಧ್ಯೆ ಭಾರತೀಯರ ಶಿಲ್ಪಕಲಾ ಪ್ರೇಮ ಸಾವಿರಾರು ವರ್ಷಗಳಲ್ಲಿ ಅಪರಿಮಿತವಾಗಿ ಬೆಳೆದಿರುವುದಕ್ಕೆ ಇಂದಿಗೂ ಭಾರತದುದ್ದಗಲಕ್ಕೂ ಕಂಡುಬರುವ ಸ್ಮಾರಕಗಳೇ ಸಾಕ್ಷಿ.

ಇತಿಹಾಸ 
ಅರ್ಜುಮನ್ದ್ ಬಾನು ಬೇಗಂ ಆಗ್ರಾದ ಪರ್ಶಿಯನ್ ಕುಟುಂಬದಲ್ಲಿ 1593ರಲ್ಲಿ ಜನಿಸಿದಳು. ಈಕೆಯ ತಂದೆ ಅಬುಲ್ ಹಸನ್ ಆಸಫ್ ಖಾನ್ ಸಿರಿವಂತ ಮತ್ತು ಮೊಘಲರ ರಾಜ್ಯದಲ್ಲಿ ಉತ್ತಮ ಪದವಿಯನ್ನೂ ಹೊಂದಿದ್ದ, ಅದೂ ಅಲ್ಲದೆ ಮೊಘಲ್ ದೊರೆ ಜಹಾಂಗೀರನ ಪತ್ನಿ ನೂರ್ಜಹಾನ್ ಅರ್ಜುಮನ್ದ್ ಬಾನುನ ಹತ್ತಿರದ ಸಂಬಂಧಿಯಾಗಿದ್ದಳು. ಹಾಗಾಗಿ ಅರ್ಜುಮನ್ದ್ ಬಾನುಗೆ ಮೊಘಲರೇನು ಕೈಗೆಟುಕದ ವಸ್ತುವಾಗಿರಲಿಲ್ಲ. ಆಕೆಗೆ ಮತ್ತು ಶಹಜಹಾನ್ಗೆ 1607ರಲ್ಲೇ ಮದುವೆ ನಿಶ್ಚಯವಾಗಿತ್ತು ಆದರೆ ಅವರ ಮದುವೆ ನಡೆದದ್ದು ಮಾತ್ರ 1612ರಲ್ಲಿ. ಅರ್ಜುಮನ್ದ್ ಬಾನು ಮದುವೆಯ ನಂತರ ಮುಮ್ತಾಜ್ ಮಹಲ್ ಎಂಬ ಹೆಸರನ್ನು ಪಡೆದಳು. ಮುಮ್ತಾಜ್ ಶಹಜಾನನ ಎರಡನೇ ಪತ್ನಿಯಾದರೂ ಬಹಳ ನಿಕಟವರ್ತಿಯಾಗಿದ್ದು, ಶಹಜಾನನ ರಾಜಕೀಯ ಸಲಹೆಗಾರಳಾಗಿಯೂ ಇದ್ದಳು. ಇವರಿಬ್ಬರಿಗೆ ಒಟ್ಟು ಹದಿನಾಲ್ಕು ಮಕ್ಕಳು. ತನ್ನ ಕಡೇಯ ಪ್ರಸವದಲ್ಲಿ ಅಧಿಕ ರಕ್ತಸ್ತ್ರಾವದಿಂದಾಗಿ ಮುಮ್ತಾಜ್ 38ನೇ ವಯಸ್ಸಿಗೆ ಕೊನೆಯುಸಿರೆಳೆದಳು. ಆಕೆಯನ್ನು ಅಪರಿಮಿತವಾಗಿ ಪ್ರೀತಿಸುತ್ತಿದ ಶಹಜಾನ್ ಆಕೆಯ ಸಾವಿನ ನೋವಿನಿಂದ ತನ್ನ ಕಡೆಯ ಕಾಲದವರೆಗೂ ಹೊರಬರಲಿಲ್ಲ. ಆಕೆಯ ನೆನಪಿಗಾಗಿ, ಸಮಾಧಿಯಾದ ತಾಜ್ ಮಹಲನ್ನು ಕಟ್ಟಲು 1632ದಲ್ಲಿ ಆದೇಶವನ್ನು ನೀಡಿದ ಮತ್ತು 1653ರಲ್ಲಿ ಪೂರ್ಣ ಪ್ರಮಾಣದಲ್ಲಿ ತಾಜ್ ಮಹಲ್ ನಿರ್ಮಾಣವಾಯಿತು. ಇದು ಇತಿಹಾಸ.
ನನ್ನ ಪಯಣ ಮತ್ತು ಸ್ವಗತ

ಪ್ರೀತಿಯ ಪರಿಭಾಷೆಗೆ ಅನೇಕ ಮೆಟ್ಟಿಲುಗಳು, ಕೆಲವರ ಹೃದಯ ಕೋಟೆಯಲ್ಲಿ ಪ್ರೇಮದ ನಿನಾದ ಸುಸ್ವರವಾಗಿ ಮೀಟಿದರೆ, ಇನ್ನೂ ಕೆಲವರು ಮಹಲುಗಳ ಗೋಡೆಯಲ್ಲಿ ನೆನಪಿನ ಚಿತ್ತಾರವನ್ನು ಕೆತ್ತಿ ಪ್ರೀತಿಯ ಉತ್ಪ್ರೇಕ್ಷೆಗೇ ಅಪವಾದವೆಂಬಂತೆ ನಮ್ಮ ಮುಂದೆ ನಿದರ್ಶನವಾಗಿದ್ದಾರೆ.

ಬೆಳ್ಳಂಬೆಳಗೆ ನವದೆಹಲಿಯ ರೈಲ್ವೇ ನಿಲ್ದಾಣದಿಂದ ಹೊರಡುವ ಅತಿವೇಗಿ ಶತಾಬ್ಧಿ ರೈಲಿನಲ್ಲಿ ಹೊರಟಾಗ ಕಾಲ 6 ಆಗಿತ್ತು. ಆಗಷ್ಟೇ ಮುತ್ತಿಟ್ಟ ಮಂಜಿನ ಅಮಲಿನಿಂದ ಚೇತರಿಸಿಕೊಳ್ಳುತ್ತಾ ಸಾಲು ಸಾಲು ಗದ್ದೆಗಳು ಹಸಿರಿನ ನಗುವನ್ನು ಚೆಲ್ಲುತ್ತಾ ಆಹ್ಲಾದಕರ ವಾತಾವರಣವನ್ನೇ ಸೃಷ್ಟಿಸಿತ್ತು. ತವಕವೋ, ಪುಳಕವೋ ಅಥವಾ ಸಹಜ ಉತ್ಸಾಹವೋ ಏನೋ ಎಂದೂ ಕಂಡಿರದ ಆ ಜಗತ್ತಿನ ಅದ್ಬುತವನ್ನು ನೋಡಬೇಕೆಂಬ ಬಯಕೆ ನಮ್ಮ ರೈಲಿನ ಗತಿಗಿಂತಲೂ ವೇಗವಾಗಿ ಸಾಗುತ್ತಿತ್ತು.

ಮನುಷ್ಯನ ಆಲೋಚನೆಗಳಿಗೆ ಅನೇಕ ಮುಖಗಳು, ನಾವು ಕಂಡ, ಕೇಳಿದ ನಮ್ಮ ಪರಿಧಿಯೊಳಗಿನ ಜ್ಞಾನದ ತೆವಲಿಗೆ ಪ್ರತೀ ಮುಖದ ಬಾಯಿಯಲ್ಲೂ ಅನೇಕ ವಿಚಾರಗಳು ಆಹಾರವಾಗುತ್ತವೆ. ನಿಜವಾಗಲೂ ಶಹಜಾನನು ತನ್ನ ಪತ್ನಿ-ಪ್ರೇಯಸಿಗಾಗಿ ಆ ಸ್ಮಾರಕವನ್ನು ಕಟ್ಟಿಸಿದನೇ? ಹಾಗಿದ್ದರೆ ಅಲ್ಲಿರುವ ಎರಡು ಸಮಾಧಿಗಳ ಎತ್ತರದಲ್ಲಿ ತಾರತಮ್ಯವೇಕೆ? ತನ್ನ ಪ್ರೇಯಸಿಗೆ ಪ್ರಸವದ ತೊಂದರೆ ಇರುವುದನ್ನು ಅರಿತರೂ ಆತ ಮುಮ್ತಾಜ್ ನಿಂದ 14 ಮಕ್ಕಳನ್ನು ಪಡೆದದ್ದು ಯಾಕೆ? ಅಥವಾ ಇತ್ತೀಚಿನ ಕೆಲವು ವಿಚಾರಗಳಂತೆ ತಾಜ್ ಮಹಲ್ ಎಂಬುದು ಮೊದಲು ಹಿಂದೂ ದೇವಾಲಯವಾಗಿದ್ದು ಮೊಘಲರು ಅದನ್ನು ಕೆಡವಿ ಸಮಾಧಿ ಮಾಡಿಕೊಂಡರೇ?
ಹೀಗೆ ಅನೇಕ ಪ್ರಶ್ನೆಗಳು.. ವಿಚಾರ ಏನೇ ಇರಲಿ ಶತಮಾನಗಳಿಂದ ಈ ಸ್ಮಾರಕ ಪ್ರೇಮದ ಪ್ರತೀಕವಾಗಿ, ಪ್ರೀತಿಯ ದ್ಯೋತಕವಾಗಿ ನಮ್ಮ ಮನಸ್ಸಲ್ಲಿ ನೆಲೆಸಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ನಮ್ಮ ರೈಲು ಆಗ್ರಾವನ್ನು ತಲುಪುವಾಗ ಸರಿಸುಮಾರು ಬೆಳಿಗ್ಗೆ 8-30 ಆಗಿತ್ತು. ಅಲ್ಲೇ ಇರುವ ರಿಕ್ಷಾನ ಹಿಡಿದು ಆ ಅಮೃತಶಿಲೆಯ ಅದ್ಭುತ ಪ್ರಪಂಚಕ್ಕೆ ನಮ್ಮ ಪಯಣ ಸಾಗಿತ್ತು. ನೂರಾರು ಜನರು, ನೂರಾರು ವೇಷಭೂಷಣಗಳು, ಆ ಕಡಿದಾದ ದಾರಿ, ಅಲ್ಲಲ್ಲಿ ಸ್ಲಮ್ಮಗಳಂತ ಮನೆಗಳ ನಡುವೆ ಸಾಗಿ ಪ್ರಪಂಚದ ಅದ್ಭುತವೊಂದು ಸೆಟೆದು ನಿಂತದ್ದು ಸೋಜಿಗವೇ ಸರಿ. ಆ ಜನಜಂಗುಳಿಯ ಮಾಲಿನ್ಯದಲ್ಲಿ ಅವರೀರ್ವರು ಸುಪ್ತವಾಗಿ ಮಲಗಿ ನಗುತ್ತಿರಬಹುದೇ?

ಹತ್ತಾರು ವರ್ಷಗಳ ಕಾಲ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಕರ್ಮಚಾರಿಗಳು ಈ ಸ್ಮಾರಕವನ್ನು ಕಟ್ಟಿದರಂತೆ, ಸ್ಮಾರಕದ ಗೇಟಿನ ಒಳಗಿಂದ ಸಾಗಿದಾಗ ಆ ಪರಿಶ್ರಮದ ಬೆಲೆ ನಿಮಗೆ ಅರಿಯದೇ ಇರದು.
ಯಮುನಾ ನದಿಯ ಹೊಸ್ತಿಲಲ್ಲಿ ಎದ್ದು ನಿಂತ ಆ ಅದ್ಬುತ ಬಿಳಿಯ ಸೌಧವೊಂದು ತನ್ನ ಆಕಾರ, ನಿಖರತೆ ಮತ್ತು ಸೌಂದರ್ಯಕ್ಕೆ ನಿಮ್ಮನ್ನು ಮೂಕವಿಸ್ಮಿತವಾಗಿಸದಿದ್ದರೆ ನಿಮಗೆ ಕಲಾಕೃತಿಯನ್ನು ಅಸ್ವಾಧಿಸುವ ಮನಸ್ಸಿಲ್ಲವೆಂದೇ ಅರ್ಥ!
ಪ್ರೇಮಿಗಳು, ಮಕ್ಕಳು, ಹೊಸದಾಗಿ ಮದುವೆಯಾದವರು, ಮದುವೆಯಾಗಬೇಕೆಂದುಕೊಂಡವರು, ಹಿರಿಯರು, ಕಿರಿಯರು, ಹಳ್ಳಿಯವರು, ಪಟ್ಟಣಿಗರು, ವಿದೇಶಿಗಳು,ಪರದೇಶಿಗಳು ಹೀಗೆ ಅಸಂಖ್ಯರು ಅದರ ಮುಂದೆ ನಿಂತು ಸೆಲ್ಫಿ, ಫೋಟೋ ತೆಗೆಯುವುದರಲ್ಲೇ ತಲ್ಲೀನರಾಗಿದ್ದಾರೆ. 250ರೂ ಗೆ ಟಿಕೆಟ್ ಕೊಂಡವರು ಶಹಜಾನ್ ಮತ್ತು ಮುಮ್ತಾಜ್ ನ ಸಮಾಧಿಯನ್ನು ನೋಡಲು ತಾಜ್ ಮಹಲ್ನ ಮೆಟ್ಟಿಲು ಹತ್ತಿ ಸಮಾಧಿಗೆ ಸುತ್ತು ಹೊಡೆದು ಅದೇ ನಿಜವಾದ ಸಮಾಧಿಯೆಂದು, ಪ್ರೇಮದ ಸ್ಮಾರಕವೆಂದು ನಂಬಿ ಪುಳಕಿತರಾದರು, ಆದರೆ ನಿಜವಾದ ಸಮಾಧಿ ಅಲ್ಲೇ ನೆಲಮಾಳಿಗೆಯ ಕತ್ತಲಲ್ಲಿ ಬೆಚ್ಚನೆ ಮುಚ್ಚಿಟ್ಟಿರುವುದರ ಅರಿವು ಅನೇಕರಿಗಿಲ್ಲ. ಆ ಸೂಕ್ಷ್ಮ ಕೆತ್ತನೆಯ ಸಂಧಿ ಸಂಧಿಗಳಲ್ಲಿ ಅನೇಕ ಪಿಸುಧ್ವನಿಗಳು ಪ್ರತಿಧ್ವನಿಸುತ್ತಾ ನೆನಪುಗಳ ಮಾಲೆಯನ್ನು ಹೆಣೆಯುತ್ತಾ ಶತಮಾನಗಳ ಕತೆಯನ್ನು ಮರುಕಳಿಸುವಂತೆ ಸಾಗಿತ್ತು. 

ಅದ್ಬುತವೆನ್ನುವುದು ನಮ್ಮ ನಮ್ಮ ವಿವೇಚನೆ ಪರಿಕಲ್ಪನೆಗೆ ಬಿಟ್ಟದ್ದು, ನನಗೆ ಅದ್ಭುತವೆಂದೆನಿಸಿದ್ದು ನಿಮಗೆ ಅನಿಸಬೇಕಿಲ್ಲ. ನನಗೆ ಸುಂದರವಾಗಿ ಕಂಡದ್ದು ನಿಮಗೆ ಸಾಧಾರಣವಾಗಿರಬಹುದು. 
ದೃಷ್ಟಿಕೋನದಿಂದ ಪರಿಕಲ್ಪನೆಗೆ ವಿಕಸಿತವಾಗುವ ಮನಸ್ಸಿನ ಭಾವನೆಗಳಿಗೆ ಒಂದು ನವಿರಾದ ಕೊಂಡಿ ಬೇಕಷ್ಟೇ,ಆಸ್ವಾದಿಸಲು-ಅನುಭವಿಸಲು.
ಅದರೆ ನಾವು ಭಾರತೀಯರಿಗೆ ಭಾವನೆಗಿಂತ ಹೆಚ್ಚು ನಮಗೆ ಶೋಕಿಯಲ್ಲಿ ಆಸಕ್ತಿ!

- ಮಹಿ ಮುಲ್ಕಿ

ಕಣ್ಮರೆಯಾದ ನಮ್ಮ ಕಕ್ವ ಶಾಲೆ

ಅದು 1938ರ ಇಸವಿ, ನಮ್ಮ ದೇಶ ಪರಕೀಯರ ಆಳ್ವಿಕೆಯಲ್ಲಿ ನಲುಗಿ, ಸ್ವತಂತ್ರಕ್ಕಾಗಿ ಹಂಬಲಿಸುತ್ತಾ ಇದ್ದ ಕಾಲ. ದೇಶಕ್ಕೆ ದೇಶವೇ ಬಡತನ, ಅಪೌಷ್ಠಿಕತೆ, ಅಸ್ಪ್ರಶ್ಯತೆ, ಅನಕ್ಷರತೆಯಿಂದ ನಲುಗಿ ಬೆಂಡಾಗಿ ಬಸವಳಿದಿದ್ದ ಕಾಲ. ಅಂತಹ ಸಂದಿಗ್ಧ ಕಾಲಘಟ್ಟದಲ್ಲಿ ಮೂಲಿಕೆ(ಇಂದಿನ ಮುಲ್ಕಿ) ಸೀಮೆಯ ಕಕ್ವ ಎಂಬ ಒಂದು ಕುಗ್ರಾಮದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿತ್ತು ಈ ನಮ್ಮ ಕಕ್ವ ಶಾಲೆ.
ಮುಲ್ಕಿಯಿಂದ ಎರಡೂವರೆ ಕಿಲೋ ಮೀಟರ್ನಷ್ಟು ದೂರದಲ್ಲಿರುವ ಅಭಿವೃದ್ಧಿಯ ಬೆಳಕೇ ಕಂಡಿರದ ಆ ದಿನಗಳಲ್ಲಿ ಸುತ್ತಲಿನ ನಾಲ್ಕ್ಹತ್ತು ಹಳ್ಳಿಯ ಮಕ್ಕಳಲ್ಲಿ ಶಿಕ್ಷಣದ ಆಸೆಯನ್ನು ಚಿಗುರೊಡೆಸಿದ್ದು ಇದೇ ಶಾಲೆ.

ಶಾಲೆಯೆಂದರೆ ನೂರಾರು ನೆನಪುಗಳನ್ನು ಹೊತ್ತ ಒಂದು ಸುಂದರ ಕನಸಿನಂತೆ,ಅಲ್ಲಿದ್ದದ್ದು ಕೇವಲ ಐದನೇ ತರಗತಿಯವರೆಗೆ ಕಲಿಯುವ ಅವಕಾಶ ಆದರೆ ಪಾಠಗಳ ಜೊತೆಗೆ ಎಳವೆಯಲ್ಲೇ ಜೀವನಾನುಭವವನ್ನು ಕಲಿಸಿದ ಪರಿ ಎಂದಿಗೂ ಮರೆಯುವಂತಿಲ್ಲ.ನಾನು ಈ ಶಾಲೆಗೆ ಒಂದನೇ ತರಗತಿಗೆ ಸೇರಿದ್ದು 1999ನೇ ಇಸವಿಯಲ್ಲಿ, ಆ ಕಾಲಕ್ಕೆ ನಮ್ಮ ಕಕ್ವ ಶಾಲೆಗೆ 61ರ ತುಂಬು ಹರೆಯ. ಅಲ್ಲಿದ್ದದ್ದು ಒಬ್ಬ ಮುಖ್ಯ ಶಿಕ್ಷಕಿ, ಮೇರಿಯೆಂದು ಆಕೆಯ ಹೆಸರು, ಮತ್ತಿಬ್ಬರು ಸಹಾಯಕ ಶಿಕ್ಷಕಿಯರು.

ಮೇರಿ ಟೀಚರ್ನ ಬಗ್ಗೆ ಎರಡು ಮಾತು ಬರೆಯದಿದ್ದರೆ ಈ ಲೇಖನ ಅಪೂರ್ಣವಾಗುತ್ತದೆ. ನೂರಾರು ಮಕ್ಕಳಿಗೆ ವಿದ್ಯೆ ನೀಡಿದ ಮಹಾತಾಯಿ ಆಕೆ. ಅವರ ಮನೆ ಇದ್ದದ್ದು ದ್ವೀಪ(ಕುದುರು)ದಲ್ಲಿ, ಅಲ್ಲಿಂದ ಪ್ರತೀದಿನ ದೋಣಿಯ ಮೂಲಕ ನದಿಯ ದಾಟಿ ಸುಮಾರು ಎರಡು ಕಿಲೋ ಮೀಟರ್ನಷ್ಟು ಕಲ್ಲು ಮುಳ್ಳಿನ ಹಾದಿಯನ್ನು ನಡೆದು ಶಾಲೆಯನ್ನು ತಲುಪುತ್ತಿದ್ದರು ಆಕೆ. ಮನೆಯಲ್ಲಿ ಬುದ್ಧಿಮಾಂದ್ಯ ಮಗ, ಕೈಗೆ ಸಿಕ್ಕುವ ಸ್ವಲ್ಪ ಸಂಬಳ, ಆ ಸಂಬಳದಲ್ಲೇ ತನಗೆ ಸಹಾಯವಾಗಲಿ ಎಂದು ಶಾಲೆಗೆ ಇನ್ನೊಬ್ಬ ಶಿಕ್ಷಕಿಯನ್ನು ನೇಮಿಸಿ ಶಾಲೆಯನ್ನು ನಡೆಸುತ್ತಿದ್ದರು. ಕುಗ್ರಾಮದ ಹಳ್ಳಿಗಾಡಿನ  ಶಾಲೆಯ ಮಕ್ಕಳು ಯಾರಿಗಿಂತಲೂ ಕಡಿಮೆಯಲ್ಲ ಎಂದು ತೋರಿಸಲು ಕನ್ನಡ ಮಾಧ್ಯಮದ ಶಿಕ್ಷಣವಾದರೂ ನಮಗೆ ಒಂದನೇ ತರಗತಿಯಿಂದಲೇ ಇಂಗ್ಲೀಷನ್ನು ಕಲಿಸಿದರು. ಇಂತಹ ಮಹಾನ್ ಶಿಕ್ಷಕರಿಂದಾಗಿಯೇ ಅಲ್ಲವೇ ನಮ್ಮಲ್ಲಿ ಅಕ್ಷರ ಪ್ರಜ್ಞೆ ಮೂಡಿದ್ದು.

ಕಕ್ವ ಶಾಲೆ ನಮಗೆ ಕಲಿಸಿದ್ದು ಕೇವಲ ಅಕ್ಷರವಲ್ಲ, ಆ ಅಕ್ಷರವನ್ನು ಪ್ರೀತಿಸಲು, ಆ ಅಕ್ಷರವನ್ನು ಗೌರವಿಸಲು, ಆ ಅಕ್ಷರವನ್ನು ನಂಬಲು ಕಲಿಸಿತು. ಪ್ರತೀದಿನ ದೂರದ ಮನೆಯ ಬಾವಿಯಿಂದ ಶಾಲೆಗಾಗಿ ನೀರನ್ನು ನಾವೇ ಎತ್ತಿ ತರುತ್ತಿದ್ದೆವು. ಈಗಿನ ಶಾಲೆಗಳಂತೆ ಅಲ್ಲಿ ಕೆಲಸಕ್ಕಾಗಿ ಜನರಿರಲಿಲ್ಲ, ನಾವೇ ಪ್ರತೀದಿನ ಶಾಲೆಯನ್ನು ಗುಡಿಸಿ, ಸಾರಿಸಿ ಸ್ವಚ್ಛಗೊಳಿಸುತ್ತಿದ್ದೆವು. ನಮಗೆ ಬಿಸಿಯೂಟವಿರಲಿಲ್ಲ, ನಾವು ಮನೆಯಿಂದ ತಂದ ಪುಟ್ಟ ಬುತ್ತಿಯ ತಿಂಡಿಯನ್ನು ಹಂಚಿ ತಿನ್ನುತ್ತಿದ್ದೆವು. ಶಾಲೆಯೆಂದರೆ ದೇಗುಲವೆಂದು ನಮ್ಮ ಹರಿದ ಚಪ್ಪಲ್ಗಳನ್ನು ಹೊರಗಡೆ ಇಟ್ಟು ಬರಿಗಾಲಲ್ಲಿ ಶಾಲೆಯ ಒಳಗೆ ಹೋಗುತ್ತಿದ್ದೆವು. ವಾರಕ್ಕೆ ಒಮ್ಮೆ ಭಜನೆ ಮಾಡುತ್ತಿದ್ದೆವು. ಒಟ್ಟಿನಲ್ಲಿ ಕಕ್ವ ಶಾಲೆ ನಮಗೆ ಶಿಕ್ಷಣದೊಂದಿಗೆ ಸಹಬಾಳ್ವೆಯನ್ನು ಕಲಿಸಿತು.ಆ ಮಣ್ಣಿನ ಗೋಡೆಯ ಮೂಲೆಗಳು ಎಳವೆಯಲ್ಲೇ ನಮಗೆ ಜೀವನಾನುಭವವನ್ನು ಕಲಿಸಿತು.

ಆದರೆ ಈಗ ಆ ಶಾಲೆ ಇಲ್ಲ! ಹುಡುಕಿದರೂ ಆ ಶಾಲೆ ಸಿಗುವುದಿಲ್ಲ.ಆ ಶಾಲೆ ಈಗ ಹೊಸರೂಪದೊಂದಿಗೆ ಸರಕಾರಿ ಶಾಲೆಯಾಗಿ, ಹೊಸ ಕಟ್ಟಡದೊಂದಿಗೆ, ಹೊಸ ಉತ್ಸಾಹಿ ಶಿಕ್ಷಕರಿಂದಾಗಿ ತನ್ನ ಹಳೆಯ ಚಾಳಿಯೆಂಬಂತೆ ಸ್ವಲ್ಪವೂ ಹಳೆಯ ಶಾಲೆಯ ಹೆಸರಿಗೆ ಕುತ್ತು ಬರದಂತೆ ತನ್ನ ಶಿಕ್ಷಣ ಕ್ರಾಂತಿಯನ್ನು ಮುಂದುವರೆಸಿದೆ. ಆದರೆ ಹಳೆಯ ಶಾಲೆ, ಆ ಕಟ್ಟಡ, ಆ ನೆನಪುಗಳು, ಆ ಕಾಲ, ಆ ಬಾಲ್ಯ ಎಲ್ಲೋ ಇತಿಹಾಸ ಸೇರಿ ಹುದುಗಿದಂತೆ ಮತ್ತೆ ಮತ್ತೆ ಮೂಲದ ಬೇರನ್ನು ಹುಡುಕುತ್ತಾ ಸಾಗುತ್ತಿದೆ.
(ಚಿತ್ರ: ಹಳೆಯ ಶಾಲೆಯ ಅವಶೇಷ)

ಇತ್ತೀಚೆಗೆ ಕಕ್ವಶಾಲೆಯ ಪಕ್ಕ ಹೋದಾಗ ಕಂಡದ್ದು ಕೇವಲ ಕುಸಿದ ಗೋಡೆ ಮತ್ತು ಇನ್ನೂ ಸ್ಥಿರವಾಗಿರುವ ಮೆಟ್ಟಿಲುಗಳು.ಅದೆಷ್ಟು ಮಕ್ಕಳ ಪಿಸುಧ್ವನಿ ಆ ಕುಸಿದ ಗೋಡೆಗಳಡಿ ಸಿಲುಕಿ ಕಣ್ಮರೆಯಾದಂತೆ.
ದೂರದಲ್ಲಿ ಒಬ್ಬಂಟಿಯಾಗಿ ನಿಂತ ಆ ಮರ ತನ್ನ ಗೆಳೆಯನನ್ನು ಕಳೆದುಕೊಂದು ರೋಧಿಸುತ್ತಾ ನನ್ನ ನೋಡಿ, ನೀನು ಆಡಿ ಬೆಳೆದ ಅಂಗಳದಿ ನಿಂತು ಬಾ ಒಮ್ಮೆ ತಬ್ಬಿಕೋ ಎಂದು ಗೋಗರೆದಂತೆ,
ಆ ಮೆಟ್ಟಿಲುಗಳ ಸಾಲು ಇನ್ನೂ ಪುಟ್ಟ ಪುಟ್ಟ ಹೆಜ್ಜೆಗಳ ಅಪೇಕ್ಷೆಯಿಂದ ಕಾದೂ ಕಾದೂ ಸುಸ್ತಾದಂತೆ.. ಹೀಗೆ ಭಾವನೆಗಳ ಮಹಾಸ್ಫೋಟವೇ ನಡೆಯಿತು ಮನಸಿನಾಳದಲ್ಲಿ.


ನಾನು ಕಲಿತ ಶಾಲೆ,ನಾನು ಮೊದಲು ಸ್ಲೇಟ್ ಹಿಡಿದ ಶಾಲೆ,ಅ ಆ ಬರೆಯಲು, ಬಲಗೈಯಲ್ಲಿ ಬರೆಯುವ ಬದಲು ಎಡಗೈಯಲ್ಲಿ ಬರೆದಾಗ ಅದನ್ನೇ ಬೆನ್ನುತಟ್ಟಿ ಮುಂದುವರಿಸಿದ ಶಾಲೆ, ನನಗೆ ಪೆನ್ಸಿಲ್ ಹಿಡಿದು, ತಪ್ಪಾದಾಗ ಒರೆಸಿ ಬರೆಸಿದ ಶಾಲೆ, ಪೆನ್ನು ಹಿಡಿದು ತಪ್ಪಾಗದಂತೆ ಬರೆಯಲು ಕಲಿಸಿದ ಶಾಲೆ. ಆ ಶಾಲೆಯಲ್ಲಿ ಈಗ ಮಕ್ಕಳ ಕಲರವವಿಲ್ಲ,ಗಂಟೆಯ ನಿನಾದವಿಲ್ಲ,ಮೇರಿ ಟೀಚರ್ ಬೆತ್ತ ಹಿಡಿದುಕೊಂಡು ನಿಂತದ್ದೂ ಕಂಡಿಲ್ಲ. ಟೀಚರ್ನ ಕಣ್ತಪ್ಪಿಸಿ ತಿನ್ನುತ್ತಿದ್ದ ಹುಣಸೆ,ಬುಗರಿ,ಮಾವುಗಳಿಲ್ಲ.ಅಂಗನವಾಡಿಯ ಡಬ್ಬಿಯೊಳಗಿದ್ದ ಬೆಲ್ಲ ಕದಿಯುವ ಎಂದರೆ ಅಲ್ಲಿ ಅಂಗನವಾಡಿಯೇ ಇಲ್ಲ!

ಕನಸುಗಳನ್ನು ಕಟ್ಟುತ್ತಾ ಮುಂದುವರಿದ ನಮಗೆ, ಹೊರ ಊರಿಗೆ ಹಾರಾಡುತ್ತಾ ಗೂಡು ಮರೆತಂತೆ ಈ ಶಾಲೆಯನ್ನು,  ಶಾಲೆ ಇರುವ ಜಾಗವನ್ನು ಉಳಿಸಿಕೊಳ್ಳಲಾಗಲಿಲ್ಲ, ತುಂಡು ಜಾಗಕ್ಕಾಗಿ ಯುದ್ಧಗಳೇ ನಡೆಯುವಾಗ ಶಾಲೆ ಉರುಳಿಸುವುದೇನು ಮಹಾ? ಶಾಲೆ ನಡೆಸಲು ಸಾಧ್ಯವೇ ಇಲ್ಲದಪರಿಸ್ಥಿತಿ ಬಂದಾಗ ಸರಕಾರವೇನೋ ಶಾಲೆಯನ್ನು ಸುಪರ್ದಿಗೆ ತೆಗೆದುಕೊಂಡು ಬೇರೆ ಜಾಗದಲ್ಲಿ ಶಾಲೆ ಕಟ್ಟಿದರೂ,ಕಕ್ವ ಶಾಲೆ ಎಂದರೆ ನನ್ನ ನೆನಪಿಗೆ ಬರುವುದು ಅದೇ ಹಳೆಯ ಹಳದಿ ಕಪ್ಪು ಗೋಡೆ,ಉದ್ದನೆಯ ಕಿಟಕಿ, ಅಲ್ಲಲ್ಲಿ ಗೆದ್ದಲಿನ ಹುತ್ತ, ಸೋರುವ ಚಾವಣಿ!

ಸಾವಿರಾರು ಜನರ ಜೀವನ ಉದ್ಧರಿಸಿದ ಶಾಲೆ ಇಂದು ನೆನಪು ಮಾತ್ರ!
ಹಳೆಯ ನೆನಪುಗಳನ್ನು ಹೊತ್ತು ಹೊಸ ಶಾಲೆಯೆಡೆ ಪಯಣಿಸಿದೆ. ಹಳೆಯ ನೆನಪು ಹೊಸ ಹುರುಪು ಎಂಬಂತೆ ಹೊಸ ಶಾಲೆ ನನ್ನ ಬರಸೆಳೆಯಿತು! ಮತ್ತೆ ಬಾಲ್ಯ ಕಣ್ಣ ಮುಂದೆ ನಲಿದಾಡಿತು!

- ಮಹಿ ಮುಲ್ಕಿ